ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿಗೆ ಕೋರ್ಟ್ ನಿರ್ದೇಶನ

7
ಆನೆಗಳ ವಾಸಸ್ಥಾನದಲ್ಲಿ ಪವನ ವಿದ್ಯುತ್ ಸ್ಥಾವರ ನಿರ್ಮಾಣ

ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿಗೆ ಕೋರ್ಟ್ ನಿರ್ದೇಶನ

Published:
Updated:

ಬೆಂಗಳೂರು: ಆನೆಗಳ ವಾಸಸ್ಥಾನದ ಸುತ್ತಲಿನ ಪ್ರದೇಶದಲ್ಲಿ ಪವನ ವಿದ್ಯುತ್ ಸ್ಥಾವರಗಳನ್ನು ನಿರ್ಮಿಸಲು ಅವಕಾಶ ನೀಡುವ ಮುನ್ನ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ಅನುಮತಿ ಪಡೆದುಕೊಳ್ಳಬೇಕು ಎಂದು ಹೈಕೋರ್ಟ್ ಶುಕ್ರವಾರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.ವಿದ್ಯುತ್ ಶಾಕ್ ಮತ್ತು ಇತರ ಕಾರಣಗಳಿಂದ ರಾಜ್ಯದಲ್ಲಿ ಆನೆಗಳು ಮೃತಪಟ್ಟ ಪ್ರಕರಣಗಳ ವರದಿ ಆಧರಿಸಿ, ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.ಮಲೆ ಮಹದೇಶ್ವರ ಬೆಟ್ಟ, ಬನ್ನೇರುಘಟ್ಟ, ಬಿಳಿಗಿರಿರಂಗನ ಬೆಟ್ಟ, ನಾಗರಹೊಳೆ, ಭದ್ರಾ ಹಾಗೂ ಅಣಶಿ ಅಭಯಾರಣ್ಯಗಳಲ್ಲಿ ಆನೆ ಕಾರಿಡಾರ್‌ಗಳಿವೆ. ಅಲ್ಲಿ ಆನೆಗಳಿಗೆ ತೊಂದರೆ ಉಂಟು ಮಾಡುವ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್ ನೇಮಕ ಮಾಡಿರುವ ಆನೆ ಕಾರ್ಯಪಡೆಯ ಸದಸ್ಯರು ನ್ಯಾಯಪೀಠವನ್ನು ಕೋರಿದರು.ಆನೆ ಕಾರಿಡಾರ್‌ಗಳಲ್ಲಿರುವ ಅಕ್ರಮ ವಿದ್ಯುತ್ ಬೇಲಿ, ತಡೆಗೋಡೆಗಳನ್ನು ನಾಶಪಡಿಸಬೇಕು ಎಂದು ಕಾರ್ಯಪಡೆಯ ಸದಸ್ಯರು ಸಲ್ಲಿಸಿರುವ ವರದಿಯಲ್ಲಿ ಮನವಿ ಮಾಡಲಾಗಿದೆ. `ಆನೆ ಕಾರ್ಯಪಡೆ ವರದಿಯನ್ನು ಕೇಂದ್ರ ಸರ್ಕಾರ ಪರಿಶೀಲಿಸಿ, ವರದಿ ಕುರಿತು ತನ್ನ ಅಭಿಪ್ರಾಯ ತಿಳಿಸಬೇಕು' ಎಂದು ನಿರ್ದೇಶನ ನೀಡಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry