ಮಾಲ್ಕಂ ಜೊತೆ ಬಿಎಫ್‌ಸಿ ಒಪ್ಪಂದ

7

ಮಾಲ್ಕಂ ಜೊತೆ ಬಿಎಫ್‌ಸಿ ಒಪ್ಪಂದ

Published:
Updated:

ಬೆಂಗಳೂರು: ಚೊಚ್ಚಲ ಐ ಲೀಗ್ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತನ್ನ ಆಟಗಾರರ ದೈಹಿಕ ಸಾಮರ್ಥ್ಯದ ಮೇಲೆ ಹೆಚ್ಚಿನ ಗಮನ ನೀಡಿದೆ. ಇದೇ ಉದ್ದೇಶದಿಂದ ನೂತನ ದೈಹಿಕ ಸಾಮರ್ಥ್ಯ ತರಬೇತುದಾರರನ್ನು ನೇಮಿಸಿಕೊಂಡಿದೆ. ಮಾಲ್ಕಂ ಪರ್ಚೇಸ್‌ ಅವರನ್ನು ಫಿಟ್‌ನೆಸ್‌ ಕೋಚ್‌ ಆಗಿ ನೇಮಿಸಿದೆ.

ಮಾಲ್ಕಂ ಈ ವಿಭಾಗದಲ್ಲಿ ಸುಮಾರು 20 ವರ್ಷಗಳ ಅನುಭವ ಹೊಂದಿದ್ದಾರೆ. ಬ್ರಿಟನ್‌ನ ಹಲವು ಅಥ್ಲೀಟ್‌ಗಳಿಗೆ ಅವರು ಫಿಟ್‌ನೆಸ್‌ ಬಗ್ಗೆ ತರಬೇತು ನೀಡಿದ್ದಾರೆ. 

ಪರ್ಚೇಸ್‌ ಅವರು ಬಿಎಫ್‌ಸಿ ಆಟಗಾರರಿಗೆ ಆರು ವಾರಗಳ ತರಬೇತಿ ನೀಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry