ಮಂಗಳವಾರ, ಜೂನ್ 15, 2021
22 °C

ಮಾಲ್ಡೀವ್ಸ್: ಸಂಸತ್‌ ಚುನಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಲೆ (ಎಎಫ್‌ಪಿ): ಮಾಲ್ಡೀವ್ಸ್‌­ನಲ್ಲಿ ಶನಿವಾರ ಸಂಸತ್‌ ಚುನಾವಣೆ ಆರಂಭವಾಯಿತು. ದ್ವೀಪರಾಷ್ಟ್ರದಲ್ಲಿ ಹೊಸ ಚುನಾವಣೆ ನಡೆಯಬೇಕೇ? ಬೇಡವೇ? ಎಂಬ ನೂತನ ಅಧ್ಯಕ್ಷರ ಗೊಂದಲದ ಮಧ್ಯೆಯೇ ಚುನಾವಣಾ ಪ್ರಕ್ರಿಯೆಗೆ ಚಾಲನೆ ದೊರೆತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಚುನಾವಣಾ ಆಯೋಗಕ್ಕೆ ಮತದಾನ ನಡೆಸಲು ಸಾಧ್ಯವಿಲ್ಲ ಎಂದು ವಾದಿಸಿ, ಶನಿ­ವಾರದ ಚುನಾವಣೆಯನ್ನು ಮುಂದೂ­­ಡ-ಬೇಕೆಂದು ಕೋರಿ ಅಧ್ಯಕ್ಷ ಅಬ್ದುಲ್ಲಾ ಯಾಮೀನ್ ಗುರುವಾರ ಸುಪ್ರೀಂ­ಕೋರ್ಟ್‌ಗೆ ಮನವಿ ಸಲ್ಲಿಸಿ­ದ್ದರು. ಆದರೆ, ಕೋರ್ಟ್ ಯಾವುದೇ ತೀರ್ಮಾನ ತೆಗೆದುಕೊಳ್ಳದ ಕಾರಣ, ನಿಗದಿತದಂತೆ ಚುನಾವಣೆ ನಡೆಯಿತು ಎಂದು ಚುನಾವಣಾ ಆಯೋಗದ ಅಧಿಕಾ­ರಿ­ ಅಶಿತಾ ರೀಮಾ ತಿಳಿಸಿದ್ದಾರೆ.ಮಾಜಿ ಅಧ್ಯಕ್ಷ ಮೊಹಮ್ಮದ್‌ ನಾಶೀದ್ ಅವರ ಮಾಲ್ಡೀವಿಯನ್‌ ಡೆಮಾಕ್ರಟಿಕ್‌ ಪಕ್ಷ ಗೆಲುವಿನ ಹಾದಿ­ಯ­ಲ್ಲಿದೆ. ಆದರೆ, ಯಾವುದೇ ಪಕ್ಷ ಬಹು­ಮತ ಪಡೆಯುವ ನಿರೀಕ್ಷೆ ಇಲ್ಲ ಎನ್ನ­ಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.