ಭಾನುವಾರ, ಮೇ 16, 2021
26 °C

ಮಾಲ್ಡೀವ್ಸ್ ಸಚಿವ-ಕೃಷ್ಣ ಚರ್ಚೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಹಿಂದೂ ಮಹಾಸಾಗರದಲ್ಲಿರುವ ಪುಟ್ಟ ದ್ವೀಪರಾಷ್ಟ್ರ ಮಾಲ್ಡೀವ್ಸ್‌ನ ನೂತನ ವಿದೇಶಾಂಗ ಸಚಿವ ಅಬ್ದುಲ್ ಸಮದ್ ಅಬ್ದುಲ್ಲಾ ಸೋಮವಾರ ಭಾರತಕ್ಕೆ ಆಗಮಿಸಿದರು.ಮಾಲ್ಡೀವ್ಸ್‌ನಲ್ಲಿ ಎರಡು ತಿಂಗಳ ಹಿಂದೆ ಹಠಾತ್ ಆಗಿ ಅಧಿಕಾರ ವರ್ಗಾವಣೆ ಆದ ನಂತರ ಅಬ್ದುಲ್ಲಾ ಅವರು ಕೈಗೊಂಡಿರುವ ಮೊದಲ ವಿದೇಶ ಪ್ರವಾಸ ಇದಾಗಿದ್ದು, ಅಲ್ಲಿನ ರಾಜಕೀಯ ಸ್ಥಿತಿಗತಿ ಕುರಿತಂತೆ ಅವರು ಭಾರತದೊಂದಿಗೆ ಚರ್ಚಿಸಲಿದ್ದಾರೆ.ಅಬ್ದುಲ್ಲಾ ಅವರು ಮಂಗಳವಾರ ವಿದೇಶಾಂಗ ವ್ಯವಹಾರ ಸಚಿವ ಎಸ್. ಎಂ ಕೃಷ್ಣ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಮಾಲ್ಡೀವ್ಸ್ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.