ಭಾನುವಾರ, ಜೂನ್ 20, 2021
26 °C

ಮಾಲ್ಡೀವ್‌್ಸ: ಪಿಪಿಎಂ ಮೈತ್ರಿಕೂಟಕ್ಕೆ ಬಹುಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಲೆ (ಪಿಟಿಐ): ಮಾಲ್ಡೀವ್ಸ್‌ ಸಂಸತ್‌ಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಅಬ್ದುಲ್ಲಾ ಯಾಮೀನ್‌ ನೇತೃತ್ವದ ಪ್ರೋಗ್ರೆಸಿವ್‌ ಪಾರ್ಟಿ ಆಫ್‌ ಮಾಲ್ಡೀವ್ಸ್ (ಪಿಪಿಎಂ) ಮತ್ತು ಅದರ ಪಾಲುದಾರ ಮೈತ್ರಿ ಪಕ್ಷಗಳು ಸ್ಪಷ್ಟ ಬಹುಮತ ಪಡೆದಿ­ರುವುದಾಗಿ ಮಾಧ್ಯಮ ವರದಿಗಳು ಭಾನುವಾರ ತಿಳಿಸಿವೆ.ಆಡಳಿತಾರೂಢ ಪಿಪಿಎಂ ಮೈತ್ರಿಕೂಟ 46 ಸ್ಥಾನಗಳನ್ನು ಗಳಿಸಿದರೆ, ಮಾಜಿ ಅಧ್ಯಕ್ಷ ಮೊಹಮದ್‌ ನಶೀದ್‌ ನೇತೃತ್ವದ ವಿರೋಧಿ ಮಾಲ್ಡೀವಿಯನ್‌ ಡೆಮಾಕ್ರಟಿಕ್‌ ಪಾರ್ಟಿ (ಎಂಡಿಪಿ) 19 ಸ್ಥಾನಗಳನ್ನು ಮಾತ್ರ ಪಡೆದಿದೆ. ಇಷ್ಟ­ಲ್ಲದೆ, ನಾಲ್ವರು ಪಕ್ಷೇತರ ಅಭ್ಯರ್ಥಿಗಳು ಕೂಡ ಜಯ ಸಾಧಿಸಿದ್ದಾರೆ.85 ಸದಸ್ಯ ಬಲದ ಸಂಸತ್‌ಗೆ ಶನಿವಾರ ಚುನಾವಣೆ ನಡೆದಿತ್ತು. 114 ಪಕ್ಷೇತರರು ಸೇರಿದಂತೆ ಒಟ್ಟು 302 ಅಭ್ಯ­ರ್ಥಿ­ಗಳು ಸ್ಪರ್ಧಾ ಕಣದಲ್ಲಿದ್ದರು. ಇನ್ನೂ ಕೆಲವು ಮತಪೆಟ್ಟಿ­ಗೆ­ಗಳು ಎಣಿಕೆಗೆ ಬಾಕಿ ಇದ್ದು, ಫಲಿತಾಂಶ ಕೆಲವೆಡೆ ಬದಲಾವಣೆ ಆಗಬಹುದು ಎಂದೂ ವರದಿಗಳು ಹೇಳಿವೆ. 2.40 ಲಕ್ಷ ಮತದಾರರಲ್ಲಿ 3/2ರಷ್ಟು ಮಂದಿ ಮತ ಚಲಾಯಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.