ಮಾಲ್‌ನಲ್ಲಿ `ಸೂಪರ್ ಅಮ್ಮ' ಸ್ಪರ್ಧೆ

ಮಂಗಳವಾರ, ಜೂಲೈ 23, 2019
20 °C

ಮಾಲ್‌ನಲ್ಲಿ `ಸೂಪರ್ ಅಮ್ಮ' ಸ್ಪರ್ಧೆ

Published:
Updated:

ಮಲ್ಲೇಶ್ವರದ ಮಂತ್ರಿ ಸ್ಕ್ವೇರ್ ಮಾಲ್‌ನಲ್ಲಿ ಕಳೆದ ವಾರಾಂತ್ಯದಲ್ಲಿ ಅಮ್ಮಂದಿರಿಗೆ ಕೆಂಪುಹಾಸಿನ ಸ್ವಾಗತ. ಎಲ್ಲೆಲ್ಲೂ ಅಮ್ಮಂದಿರೇ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಇದಕ್ಕೆ ಕಾರಣವಾದದ್ದು ಮಾಲ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ  `ಸೂಪರ್ ಮಾಮ್' ಸ್ಪರ್ಧೆ.ಕಾರ್ಯಕ್ರಮದ ತೀರ್ಪುಗಾರರಾಗಿ ಮಂತ್ರಿ ಮಾಲ್‌ನ ಮಾರ್ಕೆಟಿಂಗ್ ವಿಭಾಗದ ನಿರ್ದೇಶಕಿ ಸ್ನೇಹಾಲ್ ಮಂತ್ರಿ, ನ್ಯಾಷನಲ್ ರ‌್ಯಾಲಿ ಚಾಲಕಿ ಹಾಗೂ ಫ್ಯಾಷನ್ ಡಿಸೈನರ್ ಅನಿತಾ ಕೋಲೆ ಮತ್ತು ಪ್ರಧಾನ್ ಕಲಾ ಕೇಂದ್ರದ ಪದ್ಮಿನಿ ರವಿ ಪಾಲ್ಗೊಂಡಿದ್ದರು.ಪ್ರಾಪ್‌ಕೇರ್ ಮಾಲ್ ಮ್ಯಾನೇಜ್‌ಮೆಂಟ್‌ನ ಕಾರ್ಯನಿರ್ವಾಹಕ ನಿರ್ದೇಶಕ ಜೋನಾಥನ್ ಮಾತನಾಡಿ, `ಪ್ರತಿಯೊಬ್ಬ ಮಹಿಳೆ ನಮ್ಮ ಬದುಕಿನಲ್ಲಿ ಮಹತ್ತರ ಪಾತ್ರ ವಹಿಸುತ್ತಾಳೆ. ಆ ನಿಟ್ಟಿನಲ್ಲಿ ಅಮ್ಮಂದಿರಿಗಾಗಿ ಅವರ ಶಕ್ತಿ ಸಾಮರ್ಥ್ಯ, ಪ್ರತಿಭೆ, ಅಭಿಲಾಷೆಗಳ ಮೂಲಕ ಪ್ರಚುರಪಡಿಸಲು ಒಂದು ವೇದಿಕೆಯ ಅಗತ್ಯವಿದೆ. ಅಂತಹ ವೇದಿಕೆಯನ್ನು ಸೂಪರ್ ಅಮ್ಮಂದಿರು ಸ್ಪರ್ಧೆಯ ಮೂಲಕ ಅವರಿಗೆ ಒದಗಿಸಿಕೊಟ್ಟಿದ್ದೇವೆ' ಎಂದರು.`ಸೂಪರ್ ಅಮ್ಮ'ನಾಗಿ ಆಯ್ಕೆಯಾದ ಸುಪ್ರಿಯಾ ಅವರಿಗೆ ಯಮಹಾ ರೇ ಬ್ಯೆಕ್ ಮತ್ತು ಪೀಠೋಪಕರಣಗಳ ಸೆಟ್ ಬಹುಮಾನವಾಗಿ ನೀಡಲಾಯಿತು. ಮೊದಲ ಹಾಗೂ ಎರಡನೇ ರನ್ನರ್ ಅಪ್ ಆಗಿ ಸಾಕ್ಷಿ ಹಿಂದುಜಾ ಹಾಗೂ ಮನೀಷಾ ಸುರೇಖಾ ಆಯ್ಕೆಯಾದರು.ಸುಮಾರು 600 ಮಂದಿ ಅಮ್ಮಂದಿರ ಪೈಕಿ ಕೇವಲ 150 ಮಂದಿ ಅಮ್ಮಂದಿರಿಗೆ ಮಾತ್ರ ಕೊನೆಯ ಸುತ್ತಿನ ಸ್ಪರ್ಧೆಗೆ ಪ್ರವೇಶ ನೀಡಲಾಯಿತು. ಇದರಲ್ಲಿ ಮೂವರು ಸ್ಪರ್ಧಾಳುಗಳು ಮಾತ್ರ ಫೈನಲ್ ಬಂಪರ್ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ ವಿಜೇತರಾದರು. ಅತ್ಯಂತ ಬುದ್ಧಿವಂತ ಅಮ್ಮ, ಅತ್ಯಂತ ಕ್ರಿಯಾಶೀಲ ಅಮ್ಮ, ಉತ್ತಮ ಪರ್ಸನಾಲಿಟಿ ಹೊಂದಿದ ಅಮ್ಮ, ಅತ್ಯಂತ ಪ್ರತಿಭಾನ್ವಿತ ಅಮ್ಮ ಎಂಬ ವಿಭಾಗದಲ್ಲಿಯೂ ತಲಾ ಒಬ್ಬರು ಬಹುಮಾನ ಗಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry