ಶುಕ್ರವಾರ, ಮಾರ್ಚ್ 5, 2021
21 °C
ರಾಜ್ಯ ಸಬ್‌ಜೂನಿಯರ್‌ ಮತ್ತು ಜೂನಿಯರ್ ಈಜು ಚಾಂಪಿಯನ್‌ಷಿಪ್

ಮಾಳವಿಕಾ, ಶ್ರೀಹರಿ ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಳವಿಕಾ, ಶ್ರೀಹರಿ ದಾಖಲೆ

ಬೆಂಗಳೂರು: ಮಂಗಳವಾರ ಬಸವನಗುಡಿಯ ಈಜುಕೊಳದಲ್ಲಿ  ನಡೆಯುತ್ತಿರುವ ರಾಜ್ಯಮಟ್ಟದ ಸಬ್‌  ಜೂನಿಯರ್ ಮತ್ತು ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ  ನಾಲ್ಕು ನೂತನ ದಾಖಲೆಗಳು ರಚನೆಯಾದವು.ಬಾಲಕರ ನಾಲ್ಕನೇ ಗುಂಪಿನ 200 ಮೀಟರ್ ಮೆಡ್ಲೆಯಲ್ಲಿ ಡಾಲ್ಫಿನ್ ಕ್ಲಬ್‌ನ ಸೋಹನ್ ಗಂಗೂಲಿ (ಕಾಲ: 2ನಿ,44.19ಸೆ) ಅವರು, 2000ನೇ ಇಸ ವಿಯಲ್ಲಿ ವಿ. ಭರತಕುಮಾರ್ ಮಾಡಿದ್ದ ದಾಖಲೆಯನ್ನು ಮೀರಿ ನಿಂತರು. ಬಾಲಕರ ಎರಡನೇ ಗುಂಪಿನ 50 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಎನ್. ಶ್ರೀಹರಿ (30.29ಸೆ;) ಅವರು 2004ರಲ್ಲಿ ಎನ್‌. ಸಂದೀಪ್ (30.30) ದಾಖಲೆ ಯನ್ನು ಮುರಿದರು.ಬಾಲಕಿಯರ ಒಂದನೇ ಗುಂಪಿನ 800ಮೀಟರ್ ಫ್ರೀಸ್ಟೈಲ್‌ನಲ್ಲಿ ಬಸವನ ಗುಡಿ ಈಜುಕೇಂದ್ರದ ವಿ. ಮಾಳವಿಕಾ (ಕಾಲ;9ನಿ,27.60ಸೆ) 2012ರಲ್ಲಿ  ಪ್ರತಿಮಾ ಕೊಳ್ಳಳ್ಳಿ (9ನಿ,44.25ಸೆ) ಅವರ ದಾಖಲೆಯನ್ನು ಅಳಿಸಿ ಹಾಕಿದರು. ಮಹಿಳೆಯರ ಒಂದನೇ ಗುಂಪಿನ  50 ಮೀ ಬ್ಯಾಕ್‌ಸ್ಟ್ರೋಕ್‌ನಲ್ಲಿ ಕೆ. ಹರಿಶ್ರೀ ರೈ (32.46ಸೆ) ಅವರು 2001ರಲ್ಲಿ ರೇಷ್ಮಾ ಮಿಲ್ಲೆಟ್ (32.63ಸೆ) ಅವರ ದಾಖಲೆಯನ್ನು ಮೀರಿದರು.ಫಲಿತಾಂಶಗಳು: ಬಾಲಕರು:  ಗುಂಪು 1:ಫ್ರೀಸ್ಟೈಲ್‌: 800ಮೀ: ಮೊಹಮ್ಮದ್ ಯಾಕೂಬ್ ಸಲೀಂ (ಡಾಲ್ಫಿನ್ ಕ್ಲಬ್)–1, ಎಂ. ರಾಹುಲ್–2, ಟಿ.ಎಚ್. ಓಂಕುಮಾರ್ (ಇಬ್ಬರೂ ಬಸವನಗುಡಿ ಈಜುಕೇಂದ್ರ), ಕಾಲ: 9ನಿ,02.71ಸೆ; 50ಮೀ: ವೈಷ್ಣವ್ ಹೆಗಡೆ (ಡಾಲ್ಫಿನ್)–1, ಎನ್. ಆಕಾಶ್ (ಗ್ಲೋಬಲ್)–2, ತನ್ಮಯ್ ಆರ್. ಶೆಟ್ಟಿ –3, ಕಾಲ: 24.92ಸೆ; ಬ್ಯಾಕ್‌ಸ್ಟ್ರೋಕ್ 50ಮೀ: ಜೋಸೆಫ್ ಪಡಾವತ್ (ಬಸವನಗುಡಿ)–1, ಆರ್. ರಕ್ಷಿತ್ (ಗ್ಲೋಬಲ್)–2, ಕಾರ್ತಿಕ್ ನಾರಾಯಣ (ಬಸವನಗುಡಿ)–3, ಕಾಲ: 30.48ಸೆ;

ಗುಂಪು 2: ಫ್ರೀಸ್ಟೈಲ್‌; 1500ಮೀ: ಯತೀಶ್ ಎಸ್ ಗೌಡ (ಬಸವನಗುಡಿ ಈಜುಕೇಂದ್ರ)–1, ಶ್ರಮಿತ್ ಶ್ರೀನಿವಾಸ್ (ಬಸವನಗುಡಿ ಈಜುಕೇಂದ್ರ)–2, ಕರಣ್ ಶ್ರೀನಿವಾಸ್ (ಪಿಎಂಎಸ್‌ಸಿ)–3,ಕಾಲ: 19ನಿ,08.51ಸೆ; ಮೆಡ್ಲೆ 200ಮೀ: ಎನ್. ಶ್ರೀಹರಿ (ಗ್ಲೋಬಲ್)–1, ಪಿ. ಕುಶಾಲ್ (ಡಾಲ್ಫಿನ್)–2, ವೈಷ್ಣವ್ ರಾವ್ (ಬಸವನಗುಡಿ)–3, ಕಾಲ: 2ನಿ,26.02ಸೆ; ಫ್ರೀಸ್ಟೈಲ್ 50ಮೀ: ಸಿ.ಜೆ. ಸಂಜಯ್ (ಡಾಲ್ಫಿನ್)–1, ಎನ್. ಶ್ರೀಹರಿ (ಗ್ಲೋಬಲ್)–2, ಆರ್. ವಿನೋದ್ (ಬಸವನಗುಡಿ)–3, ಕಾಲ: 26.24ಸೆ; ಬ್ಯಾಕ್‌ಸ್ಟ್ರೋಕ್‌ 50ಮೀ;ಎನ್. ಶ್ರೀಹರಿ (ಗ್ಲೋಬಲ್ )–1, ಸಿದ್ಧಾರ್ಥ್ ಜೋಶಿ (ಗ್ಲೋಬಲ್)–2, ಸಿದ್ಧಾರ್ಥ್ ರಾಯ್ (ಬಸವನಗುಡಿ)–3, ಕಾಲ: ಹೊಸ ದಾಖಲೆ: 30.29ಸೆ; (ಹಳೆಯದು: 30.30ಸೆ; ಫ್ರೀಸ್ಟೈಲ್ 4X100ಮೀ; ಡಾಲ್ಫಿನ್ –1, ಬಸವನಗುಡಿ (ಎ)–2, ಬಸವನಗುಡಿ (ಬಿ)–3 ಕಾಲ: 4ನಿ,17ಸೆ;ಗುಂಪು 3; 200ಮೀ ಮೆಡ್ಲೆ: ದೀಪ್ ಗಿಲ್ಡಾ (ಪಿಎಂಎಸ್‌ಸಿ)–1, ಶಿವಾಂಶ್ ಸಿಂಗ್ (ಬಸವನಗುಡಿ ಈಜುಕೇಂದ್ರ)–2, ಆರ್. ವೈಭವ್ ಶೇಟ್ (ಗ್ಲೋಬಲ್ ಸೆಂಟರ್)–3, ಕಾಲ: 2ನಿ,40.31ಸೆ; ಬ್ರೆಸ್ಟ್‌ಸ್ಟ್ರೋಕ್ 100ಮೀ: ಎಸ್‌. ಹಿತೇನ್ ಮಿತ್ತಲ್ (ಬಸನವಗುಡಿ)–1, ಡಿ.ಎಸ್. ಸಾತ್ವಿಕ್ (ಬಸವನಗುಡಿ)–2, ಕಲ್ಪ ಎಸ್. ಬೊಹ್ರಾ (ಪಿಎಂಎಸ್‌ಸಿ)–3, ಕಾಲ: 1ನಿ,20.81ಸೆ;  4X50ಮೀ ಮೆಡ್ಲೆ: ಬಸವನಗುಡಿ ಈಜುಕೇಂದ್ರ–1, ಗ್ಲೋಬಲ್ ಸ್ವಿಮ್ ಸೆಂಟರ್ –2, ಪಿಎಂಎಸ್‌ಸಿ–3, ಕಾಲ: 2ನಿ,14.11ಸೆ;ಗುಂಪು 4: ಮೆಡ್ಲೆ 200 ಮೀ : ಸೋಹನ್ ಗಂಗೂಲಿ (ಡಾಲ್ಫಿನ್ ಈಜುಕೇಂದ್ರ)–1, ಉತ್ಕರ್ಷ್ ಪಾಟೀಲ (ಪಿಎಂಎಸ್‌ಸಿ)–2, ಎಂ. ಧ್ಯಾನ್ (ಡಾಲ್ಫಿನ್)–3, ಕಾಲ: ಹೊಸ ದಾಖಲೆ: 2ನಿ,44.19ಸೆ (ಹಳೆಯದು: 2ನಿ,46.24ಸೆ) ಬಟರ್‌ಫ್ಲೈ 50ಮೀ: ಸೋಹನ್ ಗಂಗೂಲಿ (ಡಾಲ್ಫಿನ್)–1, ಉತ್ಕರ್ಷ್‌ ಪಾಟೀಲ (ಪಿಎಂಎಸ್‌ಸಿ)–2, ಎಂ. ಧ್ಯಾನ್ (ಡಾಲ್ಫಿನ್)–3, ಕಾಲ: 32.62ಸೆ;ಬಾಲಕಿಯರು:  ಗುಂಪು 1: ಫ್ರೀಸ್ಟೈಲ್‌: 800ಮೀ: ವಿ. ಮಾಳವಿಕಾ (ಬಸವನಗುಡಿ ಈಜುಕೇಂದ್ರ)–1, ಶ್ರದ್ಧಾ ಸುಧೀರ್ (ಬಸವನಗುಡಿ)–2, ಎಸ್‌.ವಿ. ನಿಖಿತಾ (ಬಸವನಗುಡಿ)–3. ಕಾಲ: ಹೊಸ ದಾಖಲೆ: 9ನಿ,27.60.659ಸೆ (ಹಳೆಯದು: 9ನಿ,44.25ಸೆ), ಮೆಡ್ಲೆ 200ಮೀ: ಹೇಮಂತ್ ಜೇನುಕಲ್ (ಗ್ಲೋಬಲ್)–1, ಡಿ.ಎಸ್. ಪೃಥ್ವಿಕ್ (ಬಸವನಗುಡಿ)–2, ಯು.ಎಸ್. ಉತರೆ (ಪಿಎಂಎಸ್‌ಸಿ)–3, ಕಾಲ: 2ನಿ,33.77ಸೆ; ಶ್ರದ್ಧಾ ಸುಧೀರ್ (ಬಸವನಗುಡಿ)–1, ರಿಯಾ ಸಿಂಗ್ (ಬಸವನಗುಡಿ)–2, ಕಲ್ಪ್ ಎಸ್ ಬೊಹ್ರಾ (ಪಿಎಂಎಸ್‌ಸಿ)–3, ಕಾಲ:2ನಿ,33.77ಸೆ; 50ಮೀ ಫ್ರೀಸ್ಟೈಲ್‌: ದೀಕ್ಷಾ ರಮೇಶ್ (ಗ್ಲೋಬಲ್)–1, ಜಾನ್ ದೀಪ್ (ಬಸವನಗುಡಿ)–2, ಕೆ. ಚಂದನಾ (ವಿಜಯನಗರ)–3, ಕಾಲ:28.15ಸೆ;ಬ್ಯಾಕ್‌ಸ್ಟ್ರೋಕ್‌ 50ಮೀ: ಕೆ. ಹರಿಶ್ರೀ ರೈ (ಗ್ಲೋಬಲ್)–1, ಜಾನತಿ ರಾಜೇಶ್ (ಬಸವನಗುಡಿ)–2, ಜೊನ್ ದೀಪ್ (ಬಸವನಗುಡಿ)–3, ಕಾಲ: ಹೊಸ ದಾಖಲೆ; 32.46ಸೆ (ಹಳೆಯದು: 32.63ಸೆ). ಗುಂಪು 2: ಫ್ರೀಸ್ಟೈಲ್‌: 1500 ಮೀ: ಎಸ್.ಎಸ್‌. ನಂದಿನಿ–1, ಅಭಿಗ್ನ ಆನಂದ್–2 (ಇಬ್ಬರೂ ಬಸವನಗುಡಿ ಈಜುಕೇಂದ್ರ), ದೇವಿಕಾ ಶ್ರೀಕಾಂತ್ (ಪಿಎಂಎಸ್‌ಸಿ)–3, ಕಾಲ: 19ನಿ,31.40ಸೆ;  ಮೆಡ್ಲೆ 200ಮೀ: ಹರ್ಷಿತಾ ಜಯರಾಮ್ (ಗ್ಲೋಬಲ್)–1, ಎಸ್.ಎಸ್. ನಂದಿನಿ (ಬಸವನಗುಡಿ)–2, ಎಸ್. ತನುಜಾ (ಬಸವನಗುಡಿ)–3,  ಕಾಲ; 2ನಿ,40.54ಸೆ; 50ಮೀ ಫ್ರೀಸ್ಟೈಲ್: ಸುನಯನಾ  ಮಂಜುನಾಥ್ (ಬಸವನಗುಡಿ)–1, ಸರಯೂ ಬಾಲಚಂದರ್ (ಪಿಎಂಎಸ್‌ಸಿ)–2, ಭಾವನಾ ಐತಾಳ್ (ಬಸವನಗುಡಿ)–3, ಕಾಲ: 29.92ಸೆ;ಗುಂಪು 3: ಮೆಡ್ಲೆ 200ಮೀ: ಖುಷಿ ದಿನೇಶ್ (ಬಸವನಗುಡಿ ಈಜುಕೇಂದ್ರ)–1, ಸುವಾನಾ ಸಿ ಭಾಸ್ಕರ್ (ಡಾಲ್ಫಿನ್)–2, ಬಿ.ಜಿ. ಮಧುರಾ (ವಿಜಯನಗರ ಕ್ಲಬ್)–3 ಕಾಲ: 2ನಿ,42.77ಸೆ;  ಬ್ರೆಸ್ಟ್‌ಸ್ಟ್ರೋಕ್‌ 100ಮೀ: ರಿದ್ದಿ ಜುಯಾಲ್ (ಪಿಎಂಎಸ್‌ಸಿ)–1, ಮಧು ರಾ (ವಿಜಯನಗರ ಕ್ಲಬ್)–2, ಬಿ.ಆರ್. ರಜನಿ (ಬಸವನಗುಡಿ)–3, ಕಾಲ: 1ನಿ,24.85ಸೆ; ಗುಂಪು 4: ಮೆಡ್ಲೆ 200ಮೀ: ಎ. ಜದಿದನ್ (ಡಾಲ್ಫಿನ್)–1, ಮೇಧಾ ವೆಂಕಟೇಶ್ (ಬಸವನಗುಡಿ)–2, ಬಿ. ಕೀರ್ತಿ (ಪಿಎಂಎಸ್‌ಸಿ)–3, ಕಾಲ: 2ನಿ,59.73ಸೆ;  ಬಟರ್‌ಫ್ಲೈ 50ಮೀ: ಎ. ಜದಿದನ್ –1, ಮೇಧಾ ವೆಂಕಟೇಶ್ –2, ಲತೀಶಾ ಮಂದಣ್ಣ –3 ಕಾಲ:35.79ಸೆ;

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.