ಮಾವಿನಮಿಡಿ ಅಡುಗೆ

7

ಮಾವಿನಮಿಡಿ ಅಡುಗೆ

Published:
Updated:
ಮಾವಿನಮಿಡಿ ಅಡುಗೆ

ಮಾವಿನ ಮಿಡಿ ಚಟ್ನಿ

ಸಾಮಗ್ರಿ:
ತೆಂಗಿನಕಾಯಿ ತುರಿ 1 ದೊಡ್ಡ ಕಪ್, ಮಾವಿನ ಮಿಡಿ 2-3, ಉಪ್ಪು, ಒಣಮೆಣಸು 3-4, ಕೊಬ್ಬರಿ ಎಣ್ಣೆ 1 ಚಮಚ, ಸಣ್ಣಗೆ ಹೆಚ್ಚಿದ ಈರುಳ್ಳಿ, ಒಗ್ಗರಣೆಗೆ ಕೊಬ್ಬರಿ ಎಣ್ಣೆ 2 ಚಮಚ, ಸಾಸಿವೆ, ಜೀರಿಗೆ, ಕರಿಬೇವು.ವಿಧಾನ: ಒಣಮೆಣಸನ್ನು ಎಣ್ಣೆಯಲ್ಲಿ ಹುರಿದುಕೊಳ್ಳಿ. ಅದಕ್ಕೆ ಉಪ್ಪು, ತೆಂಗಿನಕಾಯಿ, ಹೆಚ್ಚಿದ ಮಾವಿನ ಮಿಡಿ, ನೀರು ಸೇರಿಸಿ ರುಬ್ಬಿ. ಒಗ್ಗರಣೆ ಕೊಡಿ. ಬಡಿಸುವಾಗ ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ. ಉಪ್ಪು ನೋಡಿ ಹಾಕಿ. ಯಾಕೆಂದರೆ ಮಾವಿನಮಿಡಿಯಲ್ಲಿ ಉಪ್ಪಿನಂಶ ಇರುತ್ತದೆ. ಹುಳಿಯ ಅವಶ್ಯವಕತೆ ಇಲ್ಲ.ಮಾವಿನ ಮಿಡಿ ತಂಬ್ಳಿ:

ಸಾಮಗ್ರಿ:
ತೆಂಗಿನ ತುರಿ ಕಾಲು ಕಪ್, ಮಾವಿನಮಿಡಿ 1-2, ಜೀರಿಗೆ ಕಾಲು ಚಮಚ, ಕಾಳುಮೆಣಸು, ಉಪ್ಪು ರುಚಿಗೆ, ಕಡೆದ ಮಜ್ಜಿಗೆ 2-3 ಕಪ್, ಎಣ್ಣೆ 1 ಚಮಚ.

ಒಗ್ಗರಣೆಗೆ: ಕೊಬ್ಬರಿ ಎಣ್ಣೆ 2-3 ಚಮಚ, ಸಾಸಿವೆ, ಕರಿಬೇವು ಸ್ವಲ್ಪ, ಒಣಮೆಣಸು 1-2.

ವಿಧಾನ: ಮಾವಿನ ಮಿಡಿಯ ಬೀಜ ತೆಗೆದು ಹೆಚ್ಚಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಜೀರಿಗೆ ಮತ್ತು ಕಾಳುಮೆಣಸನ್ನು ಹುರಿದುಕೊಳ್ಳಿ. ಅದಕ್ಕೆ ಕಾಯಿತುರಿ, ಉಪ್ಪು,ಹೆಚ್ಚಿದ ಮಾವಿನಮಿಡಿಯನ್ನು ಹಾಕಿ ನುಣ್ಣನೆ ರುಬ್ಬಿಕೊಳ್ಳಿ. ಅದಕ್ಕೆ 2-3 ಲೋಟ ಮಜ್ಜಿಗೆ ಬೆರೆಸಿ. ಒಗ್ಗರಣೆ ಕೊಡಿ.ಕಡಗಾಯಿ ಮೊಸರು ಗೊಜ್ಜು

ಸಾಮಗ್ರಿ: 
ಕಡಗಾಯಿ 3-4 ಚಮಚ, ಈರುಳ್ಳಿ 1, ಉಪ್ಪು (ಸ್ವಲ್ಪ ಸಾಕು) ಸಕ್ಕರೆ ಚಿಟಿಕೆ, ಗಟ್ಟಿ ಮೊಸರು 2 ಕಪ್, ಕೊಬ್ಬರಿಎಣ್ಣೆ- 2 ಚಮಚ, ಸಾಸಿವೆ, ಜೀರಿಗೆ, ಕರಿಬೇವು, ಒಣಮೆಣಸಿನಕಾಯಿ 2.ವಿಧಾನ: ಮೊಸರಿಗೆ ಉಪ್ಪು,ಉಪ್ಪಿನಕಾಯಿ ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಒಗ್ಗರಣೆ ಕೊಡಿ. ಈರುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿ ಸೇರಿಸಿ. ಬೇಕಾದರೆ ಕೊತ್ತುಂಬರಿ ಸೊಪ್ಪನ್ನು ಹಾಕಿಕೊಳ್ಳಬಹುದು.ಕಡಗಾಯಿ ಅವಲಕ್ಕಿ

ಸಾಮಗ್ರಿ:
ತೆಳು ಅವಲಕ್ಕಿ 3 ಕಪ್, ತೆಂಗಿನ ತುರಿ 1 ಕಪ್, ಹೆಚ್ಚಿದ ಈರುಳ್ಳಿ 1/2ಕಪ್, ಬೆಲ್ಲ ಸ್ವಲ್ಪ, ಕಡಗಾಯಿ (ಉಪ್ಪಿನ ಕಾು) 2-3 ಚಮಚ, ಹಸಿ ಕೊಬ್ಬರಿ ಎಣ್ಣೆ 2-3 ಚಮಚ

ವಿಧಾನ:  ಕೊಬ್ಬರಿ ಎಣ್ಣೆಗೆ ಉಪ್ಪಿನಕಾಯಿ ಸೇರಿಸಿ. ಬೆಲ್ಲ ಹಾಕಿ. ಅವಲಕ್ಕಿ ಹಾಕಿ ಚೆನ್ನಾಗಿ ಕಲಸಿ. ಕಾಯಿತುರಿ ಮತ್ತು ಈರುಳ್ಳಿ ಸೇರಿಸಿ. ಒಗ್ಗರಣೆ ಬೇಕಿಲ್ಲದ ಈ ಅವಲಕ್ಕಿ ಗಟ್ಟಿ ಮೊಸರಿನೊಂದಿಗೆ ಬಲು ರುಚಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry