ಮಾವುತರ ಮಕ್ಕಳಿಗೆ ನಗರ ಪ್ರದಕ್ಷಿಣೆ

7

ಮಾವುತರ ಮಕ್ಕಳಿಗೆ ನಗರ ಪ್ರದಕ್ಷಿಣೆ

Published:
Updated:

ಮೈಸೂರು: ನಗರದ ಅಂಬಾವಿಲಾಸ ಅರಮನೆಯಲ್ಲಿ ಬೀಡು ಬಿಟ್ಟಿರುವ ಕಾವಾಡಿ ಹಾಗೂ ಮಾವುತರ ಮಕ್ಕಳು ಹಾಗೂ ಅವರ ಅಮ್ಮಂದಿರು ನಗರ ಪ್ರದಕ್ಷಿಣೆ ಕೈಗೊಳ್ಳಲಿದ್ದಾರೆ. ಜತೆಗೆ, ಕೆಆರ್‌ಎಸ್‌ಗೂ ಭೇಟಿ ನೀಡಲಿದ್ದಾರೆ.ಇಂಥ ಸಂತೋಷದ ಸಂಗತಿಯನ್ನು ಶಾಸಕ ಎಂ.ಕೆ. ಸೋಮವೇಖರ್‌ ಮಂಗಳವಾರ ಪ್ರಕಟಿಸಿದರು. ಅಂಬಾ ವಿಲಾಸ ಅರಮನೆಯಲಿ್ಲನ ಟೆಂಟ್‌ ಶಾಲೆಯಲ್ಲಿ ಕಲಿಯುತ್ತಿರುವ ಮಾವುತರು ಮತು್ತ ಕಾವಾಡಿ ಮಕ್ಕಳಿಗೆ ಮಂಗಳವಾರ ಸಮವಸ್ತ್ರ ಹಾಗೂ ಸಿಹಿ ವಿತರಿಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.‘ಇನ್ನೊಂದೆರಡು ದಿನಗಳಲ್ಲಿ ಟೆಂಟ್‌ ಶಾಲೆಯಲ್ಲಿನ ಮಕ್ಕಳು ತಮ್ಮ ಶಿಕ್ಷಕಿಯರೊಂದಿಗೆ ನಗರದಲಿ್ಲನ ಮೃಗಾಲಯ, ಚಾಮುಂಡಿಬೆಟ್ಟ, ಚರ್ಚ್ ನೋಡಿದ ಮೇಲೆ ಕೆಆರ್‌ಎಸ್‌ಗೆ ತೆರಳುವರು. ತಾಯಂದಿರು ತೆರಳುವುದರಿಂದ ಮಕ್ಕಳ ಜಾಗೃತಿಯಾಗುತ್ತದೆ. ಜತೆಗೆ, ಅವರು ಕೂಡಾ ಸ್ಥಳಗಳನ್ನು ವೀಕ್ಷೀಸಿದಂತಾಗುತ್ತದೆ. ಅವರೊಂದಿಗೆ ಶಿಕ್ಷಕಿಯರಾದ ನೂರ್‌ಫಾತಿಮಾ ಹಾಗೂ ಶಮೀಂ ತೆರಳಿ ಮಾರ್ಗದರ್ಶನ ಮಾಡುತ್ತಾರೆ’ ಎಂದು ಶಾಸಕರು ತಿಳಿಸಿದರು.‘ಸೆ. 23ರಂದು ಇನೊ್ನಂದು ಗಜಪಡೆ ಬರಲಿದೆ. ಆಗ ಮಾವುತರ ಹಾಗೂ ಕಾವಾಡಿಗಳ ಕುಟುಂಬಗಳು ಬರಲಿದ್ದು, ಅವರ ಮಕ್ಕಳೂ ಟೆಂಟ್‌ ಶಾಲೆಯಲಿ್ಲ ಕಲಿಯುತ್ತಾರೆ. ಆಗ 1ರಿಂದ 4 ಹಾಗೂ 5ರಿಂದ 7ನೇ ತರಗತಿಯವರೆಗೆ ಮಕ್ಕಳನ್ನು ವಿಂಗಡಿಸಿ ಕಲಿಸಲಾಗುತ್ತದೆ’ ಎಂದರು.‘ಸದ್ಯಕ್ಕೆ ಕಾಡಿನಿಂದ ತಂದ ಸೌದೆಯಿಂದ ಮಾವುತರು ಹಾಗೂ ಕಾವಾಡಿಗಳು ಅಡುಗೆ ಮಾಡಿಕೊಳ್ಳುತಿ್ತದಾ್ದರೆ. ಅವು ಮುಗಿದುಹೋಗುವ ಮುನ್ನ ಸೀಮೆಎಣ್ಣೆ ಅಗತ್ಯವಿದೆ ಎಂದು ಕೇಳಿದ್ದಾರೆ. ಅವರ ಬೇಡಿಕೆಯನ್ನು ಶೀಘ್ರದಲ್ಲೇ ಈಡೇರಿಸಲಾಗುತ್ತದೆ’ ಎಂದು ಭರವಸೆ ನೀಡಿದರು.‘ಕನ್ನಡ, ಗಣಿತ ಇತರ ವಿಷಯಗಳ ಜತೆಗೆ ಇಂಗಿ್ಲಷನ್ನೂ ಕಲಿಸಿ’ ಎಂದು ಶಿಕ್ಷಕರಿಗೆ ಶಾಸಕರು ಹೇಳಿದಾಗ, ’ರೈಮ್ಸ್‌ ಕಲಿಸುತಿ್ತದ್ದೇವೆ’ ಎಂದು ಶಿಕ್ಷಕಿಯರು ಉತ್ತರಿಸಿದರು. ದಕಿ್ಷಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌. ರಘುನಂದನ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry