ಶುಕ್ರವಾರ, ಮೇ 14, 2021
31 °C

ಮಾವೊವಾದಿಗಳ ಬಿಡುಗಡೆ: ಸುಪ್ರೀಂ ಮೆಟ್ಟಿಲೇರಿದ ಮಾಜಿ ಸೇನಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಅಪಹೃತ ಶಾಸಕನ ಬಿಡುಗಡೆಗೆ ಪ್ರತಿಯಾಗಿ ಜೈಲಿನಲ್ಲಿರುವ ಮಾವೊವಾದಿಗಳನ್ನು ಬಿಡುಗಡೆಗೊಳಿಸಲು ಮುಂದಾಗಿರುವ ಒಡಿಶಾ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ನಿವೃತ್ತ ಮೇಜರ್ ಜನರಲ್ ಗಂಗೂರ್‌ದಿಪ್ ಭಕ್ಷಿ ಅವರು ಬುಧವಾರ ಸುಪ್ರೀಂಕೋರ್ಟ್‌ನ ಮೆಟ್ಟಿಲೇರಿದ್ದಾರೆ.ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಭಕ್ಷಿ ಅವರು `ಸೈನಿಕರು ಪ್ರಾಣವನ್ನು ಪಣಕಿಟ್ಟು ಸೆರೆ ಹಿಡಿದ ಮಾವೊವಾದಿಗಳನ್ನು ಅವರ ಬೇಡಿಕೆಗೆ ಮಣಿದು ಸರ್ಕಾರ ಯಾವುದೇ ಕಾರಣಕ್ಕೂ ಬಿಡುಗಡೆ ಮಾಡದಂತೆ ತಡೆಹಿಡಿಯಬೇಕು~ ಎಂದು ಮನವಿ ಮಾಡಿಕೊಂಡಿದ್ದಾರೆ.ಇದೇ ವೇಳೆ ಭಕ್ಷಿ ಅವರು ಮಾವೊವಾದಿಗಳು ಬುಧವಾರ ಸಂಜೆ 5ಗಂಟೆಯವರೆಗೆ ಗಡುವು ವಿಧಿಸಿರುವುದರಿಂದ ತಮ್ಮ ಅರ್ಜಿಯ ವಿಚಾರಣೆಯನ್ನು ಶೀಘ್ರವಾಗಿ ನಡೆಸುವಂತೆ ಕೋರ್ಟ್‌ಗೆ ಕೋರಿಕೆ ಮಾಡಿಕೊಂಡರು.ಭಕ್ಷಿ ಅವರ ಮನವಿಗೆ ಸ್ಪಂದಿಸಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಟಿ.ಎಸ್.ಠಾಕೂರ್ ಮತ್ತು ಜ್ಞಾನ್ ಸುಧಾ ಮಿಶ್ರಾ ಅವರನ್ನು ಒಳಗೊಂಡ ಪೀಠವು `ಸರ್ಕಾರದ ಕ್ರಮಕ್ಕೆ ತಡೆ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿ ವಿಳಂಬವಾಗಿದ್ದು, ಹನ್ನೊಂದು ಗಂಟೆಗೆ ಆಗಮಿಸಿ ತುರ್ತಾಗಿ ವಿಚಾರಣೆ ನಡೆಸಬೇಕು ಎನ್ನುವುದು ಸಮರ್ಥಿಕೊಳ್ಳಲು ಸಾಧ್ಯವಿಲ್ಲ~ ಎಂದು ಹೇಳಿತು.ಇದೇ ವೇಳೆ ಪೀಠವು ಈ ವಿಷಯದಲ್ಲಿ ಕೇಂದ್ರ ಕಾನೂನು ಅಧಿಕಾರಿಗಳ ಸಲಹೆಯ ಅಗತ್ಯವಿದ್ದು, ವಿಚಾರಣೆಯನ್ನು ಗುರುವಾರ ಆಲಿಸುವುದಾಗಿ ತಿಳಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.