ಶನಿವಾರ, ನವೆಂಬರ್ 23, 2019
18 °C

ಮಾಸಾಂತ್ಯಕ್ಕೆ `ಎಂಎಂಟಿಸಿ' ಷೇರು ವಿಕ್ರಯ

Published:
Updated:

ನವದೆಹಲಿ (ಪಿಟಿಐ): ಏಪ್ರಿಲ್ ಅಂತ್ಯದಲ್ಲಿ ಅಥವಾ ಮೇ ಮೊದಲ ವಾರದಲ್ಲಿ ಸರ್ಕಾರಿ ಸ್ವಾಮ್ಯದ `ಎಂಎಂಟಿಸಿ' ಷೇರು ವಿಕ್ರಯ ನಡೆಯಲಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. `ಎಂಎಂಟಿಸಿ'ಯಲ್ಲಿ ತಾನು ಹೊಂದಿರುವ ಪಾಲಿನಲ್ಲಿ ಶೇ 9.33ರಷ್ಟು ಷೇರುಗಳನ್ನು ಸರ್ಕಾರ ಆಫರ್ ಫಾರ್ ಸೇಲ್ ಮೂಲಕ ಮಾರಾಟ ಮಾಡಲಿದೆ.ಈ ಮೂಲಕ ರೂ.250ರಿಂದರೂ.300 ಕೋಟಿ ಬಂಡವಾಳ ಸಂಗ್ರಹಿಸುವ ಗುರಿ ನಿಗದಿಪಡಿಸಲಾಗಿದೆ.ಸದ್ಯ `ಎಂಎಂಟಿಸಿ'ಯ ಮಾರುಕಟ್ಟೆ ಮೌಲ್ಯರೂ.22,800 ಕೊಟಿಯಷ್ಟಿದೆ. ಷೇರುಪೇಟೆ ಸ್ಥಿರಗೊಳ್ಳುತ್ತಿದ್ದಂತೆ ಷೇರು ವಿಕ್ರಯ ಇಲಾಖೆ `ಒಎಫ್‌ಎಸ್' ದಿನಾಂಕ ಪ್ರಕಟಿಸಲಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಷೇರು ವಿಕ್ರಯದ ಮೂಲಕರೂ.40 ಸಾವಿರ ಕೋಟಿ ಸಂಗ್ರಹಿಸುವ ಗುರಿ ಸರ್ಕಾರ ಹೊಂದಿದೆ.

ಪ್ರತಿಕ್ರಿಯಿಸಿ (+)