ಗುರುವಾರ , ಏಪ್ರಿಲ್ 22, 2021
28 °C

ಮಾಸಾಶನಕ್ಕೆ ಆಗ್ರಹಿಸಿ ಡಿಸಿಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಕಳೆದ ಒಂದುವರ್ಷದಿಂದ ಸ್ಥಗಿತಗೊಳಿಸಿರುವ ಮಾಸಾಶನ ನೀಡುವಂತೆ ಅಗ್ರಹಿಸಿ ಯಲ್ಲಾಪುರ ತಾಲ್ಲೂಕು ಬೀಗಾರಿನ ಗಣಪತಿ ಹೆಗಡೆಯವರ ಈಚೆಗೆ ಜಿಲ್ಲಾಧಿಕಾರಿ ಇಂಕೋಂಗ್ಲಾ ಜಮೀರ್ ಅವರಿಗೆ ಮನವಿ ಸಲ್ಲಿಸಿದರು.`14 ವರ್ಷಗಳಿಂದ ಬರುತ್ತಿದ್ದ ರೂ 400 ಮಾಶಾಸನವನ್ನು ರಾಜಕೀಯ ಕಾರಣದಿಂದ ತಹಶೀಲ್ದಾರರು ಸ್ಥಗಿತಗೊಳಿಸಿದ್ದಾರೆ. ಈ ಕುರಿತಂತೆ ಅವರಿಗೆ ಹಲವುಬಾರಿ ಮನವಿ ಮಾಡಿಕೊಂಡರೂ ಎನೂ ಪ್ರಯೋಜನವಾಗಲಿಲ್ಲ~ ಎಂದು ವಿದ್ಯುತ್ ಅಪಘಾತದಲ್ಲಿ ತಮ್ಮ ಎರಡೂ ಕೈಗಳನ್ನು ಕಳೆದುಕೊಂಡಿರುವ ಹೆಗಡೆ ಮನವಿಯಲ್ಲಿ ತಿಳಿಸಿದ್ದಾರೆ.ಬೀಗಾರ ಗುಡ್ಡಗಾಡು ಪ್ರದೇಶವಾಗಿದ್ದು ಕೃಷಿ ಮಾಡಿ ಜೀವನ ಸಾಗಿಸುತ್ತಿದ್ದೇನೆ. ಅಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಎರಡೂ ಕೈಗಳನ್ನು ಕಳೆದುಕೊಂಡಿದ್ದೇನೆ. ನನಗೆ ಒಂದು ಎಕರೆ ಕೃಷಿ ಜಮೀನಿದೆ ಎನ್ನುವ ಕಾರಣ ನೀಡಿ ತಹಶೀಲ್ದಾರರು ಮಾಶಾಸನ ಸ್ಥಗಿತಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.