ಮಂಗಳವಾರ, ಅಕ್ಟೋಬರ್ 22, 2019
26 °C

ಮಾಸಾಶನ ದೋಷ ಸರಿಪಡಿಸಲು ಆಗ್ರಹ

Published:
Updated:

ಮುಳಬಾಗಲು: ಮಾಸಾಶನ ಬರದೆ ನಮ್ಮ ಜೀವನ ನಿರ್ವಹಣೆಗೆ ತೊಂದರೆಯಾಗಿದೆ ಎಂದು ಪಟ್ಟಣದ ವೃದ್ಧರು, ಅಂಗವಿಕಲರು ಮತ್ತು ವಿಧವೆಯರು ಮಿನಿವಿಧಾನಸೌಧ ಮುಂದೆ ಬುಧವಾರ ಧರಣಿ ನಡೆಸಿದರು.ಕಳೆದ ತಿಂಗಳಿಂದಲೂ ಮಾಸಾಶನ ಸ್ಥಗಿತವಾಗಿದೆ. ತಕ್ಷಣ ವೇತನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.ಧರಣಿನಿರತರಿಗೆ ಬೆಂಬಲವಾಗಿ ಪುರಸಭೆ ಮಾಜಿ ಸದಸ್ಯ ಠಾಕೂರ್‌ಸಿಂಗ್ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯೆ ಲಕ್ಷ್ಮೀದೇವಮ್ಮ ಹಾಗೂ ಇತರರು ಪಾಲ್ಗೊಂಡಿದ್ದರು. ವೃದ್ಧಾಪ್ಯವೇತನ. ಸಂಧ್ಯಾಸುರಕ್ಷಾ ಪಡೆಯುತ್ತಿರುವ ವೃದ್ಧರು, ವಿಧವೆಯರು ಹಾಗೂ ಅಂಗವಿಕಲರು ಜೀವನದ ನಿರ್ವಹಣೆಗೆ ಮಾಸಾಶನದ ಮೇಲೆ ಆಧಾರಪಟ್ಟಿದ್ದಾರೆ.

ಮಾಸಾಶನದ ತಾಂತ್ರಿಕ ದೋಷ ತಕ್ಷಣ ಸರಿಪಡಿಸಲು ಠಾಕೂರ್‌ಸಿಂಗ್ ಒತ್ತಾಯಿಸಿದರು.ಮಾಸಾಶನ ನೀಡಲು ಕ್ರಮ ತೆಗೆದುಕೊಳ್ಳುವುದಾಗಿ ತಹಶೀಲ್ದಾರ್ ಪಿ. ಜಯಮಾಧವ ಭರವಸೆ ನೀಡಿದ ಮೇಲೆ ಧರಣಿ ವಾಪಸ್ ಪಡೆಯಲಾಯಿತು.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)