ಶುಕ್ರವಾರ, ಜೂನ್ 25, 2021
21 °C

ಮಾಸಾಶನ ರದ್ದತಿ ಆದೇಶ ಹಿಂಪಡೆಯಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಳೇದಗುಡ್ಡ: ಅನೇಕ ಅಂಗವಿಕಲರ ವಿಧವೆಯರ ಹಾಗೂ ಹಿರಿಯ ನಾಗರಿಕರ ಮಾಸಾಶನ ರದ್ದು ಮಾಡಿ ರುವುದನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ವಿ.ಜಿ. ಮ್ಯಾಗಿನಹಳ್ಳಿ ನೇತೃತ್ವದಲ್ಲಿ ವಿಶೇಷ ತಹಶೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.ಅಂಗವಿಕಲರ ವಿಧವೆಯರ ಹಾಗೂ ಹಿರಿಯ ನಾಗರಿಕರ ಮನವಿಯಲ್ಲಿ ಅನೇಕ ಬಾರಿ ಮನವಿ ಮಾಡಿಕೊಂಡರೂ ಇಂದು ನಾಳೆ ಎಂದು ಹೇಳುತ್ತಿರಿ, ಮಾಸಾಶನ ರದ್ದು ಮಾಡುವ ಪೂರ್ವದಲ್ಲಿ ಯಾವುದೇ ರೀತಿಯ ಸೂಕ್ತ ಸಮೀಕ್ಷೆ ನಡೆಸಿಲ್ಲ, ಏಕಾಏಕಿ ಮಾಸಾಶನ ರದ್ದು ಮಾಡಲಾಗಿದೆ ಎಂದು ದೂರಿದರು.ಮಾಸಾಶನ ಪಡೆಯುವ ಫಲಾನು ಭವಿಗಳು ಸರಕಾರ ನೀಡುವ ಮಾಸಾಶ ನದ ಮೇಲೆ ಅವಲಂಬಿತರಾಗಿ ಜೀವನ ನಡೆಸುತ್ತಿದ್ದಾರೆ. ಅಂತವರಿಗೆ ತುಂಬಾ ತೊಂದರೆಯಾಗಿದೆ. ಎಂದು ಅವಲತ್ತು ಕೊಂಡರು.ಮನವಿ ಸ್ವೀಕರಿಸಿದ ವಿಶೇಷ ತಹಶೀ ಲ್ದಾರ ಪಿ. ವಿ. ದೇಸಾಯಿ ಅವರು ಅರ್ಹರಿಗೆ ನ್ಯಾಯ ಒದಗಿಸುವ ಭರವಸೆ ನೀಡಿದರು. ಆದಪ್ಪ ತಾಂಡೂರ, ಕಾಶೀಮಸಾಬ ಡಾಲಾ ಯತ್, ದೇವೇಂದ್ರಪ್ಪ ರೂಡಗಿ, ಶಿವಸಂಗಪ್ಪ ಮುರನಾಳ, ನೀಲಪ್ಪ ಆದಿ, ಸಂಗಪಗಪ ನಿಡಗುಂದಿ, ಶಂಕ್ರಪ್ಪ ಒಣರೊಟ್ಟಿ, ಶೇಖವ್ವ ಸಾಲಿಮಠ  ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.