ಭಾನುವಾರ, ಏಪ್ರಿಲ್ 18, 2021
29 °C

ಮಾಸ್ಟರ್ ಪ್ಲಾನ್ ಮಾಡಲು ಬಿಡುವುದಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಸುರಪುರ: ಪಟ್ಟಣದ ಮಾಸ್ಟರ್ ಪ್ಲಾನ್‌ಗೆ ಪುರಸಭೆ ಒಪ್ಪಿಗೆ ನೀಡಿದೆ. ಕೆಲ ದಿನಗಳಲ್ಲೆ ರಸ್ತೆ ವಿಸ್ತರಣೆ ಕಾರ್ಯಾಚರಣೆ ನಡೆಯಲಿದೆ ಎಂಬ ಸುದ್ದಿಯಿಂದ ನಾಗರಿಕರು ಆತಂಕಗೊಳ್ಳುವುದು ಬೇಡ. ಯಾವುದೇ ಕಾರಣದಿಂದ ಮಾಸ್ಟರ್ ಪ್ಲಾನ್ ಮಾಡಲು ಬಿಡುವುದಿಲ್ಲ ಎಂದು ಸಣ್ಣ ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಾಜೂಗೌಡ ಅಭಯ ನೀಡಿದರು.ಶನಿವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಸಂಖ್ಯೆ ಅಧಾರದ ಮೇಲೆ ಪಟ್ಟಣದಲ್ಲಿ ರಸ್ತೆ ವಿಸ್ತರಣೆ ಮಾಡಬೇಕು ಎನ್ನುವುದು ಪ್ರಾಧಿಕಾರದ ಉದ್ದೇಶವಿರಬಹುದು, ಆದರೆ ಇಲ್ಲಿ ಸ್ಥಳಾವಕಾಶವೆ ಇಲ್ಲದಿರುವಾಗ ಮಾಸ್ಟರ್ ಪ್ಲಾನ್ ಅವಶ್ಯಕತೆ ಬರುವುದಿಲ್ಲ ಎಂದರು.ಈಗಾಗಲೇ 2007 ರಲ್ಲಿ ಪಟ್ಟಣದಲ್ಲಿ ರಸ್ತೆ ವಿಸ್ತರಣೆ ನಡೆದಿದೆ. ಪುನಃ ಮಾಡುವ ಅಗತ್ಯವಿಲ್ಲ. ಪಟ್ಟಣ ಗುಡ್ಡಗಾಡು ಪ್ರದೇಶವಾಗಿದ್ದು ವಿಸ್ತರಣೆ ಗೆ ರಿಯಾಯತಿ ಇರುತ್ತದೆ. ಸ್ಥಳದ ಅಭಾವ ಎದುರಿಸುತ್ತಿರುವ ಇಲ್ಲಿನ ನಾಗರಿಕರು ಕಾರ್ಯಾಚರಣೆ ಮಾಡಿದರೆ ಬೀದಿಗೆ ಬೀಳುತ್ತಾರೆ. ಕಾರಣ ರಸ್ತೆ ವಿಸ್ತರಣೆ ಕೈಬಿಡಲು ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.ಪಟ್ಟಣದಲ್ಲಿ ಜನಸಂದಣಿ ಮತ್ತು ವಾಹನ ಸಂಚಾರವನ್ನು ನಿಯಂತ್ರಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ನಾಗರಿಕರು ವಿಸ್ತರಣೆ ಆತಂಕದಿಂದ ದೂರವಾಗಿ ಎಂದು ಮನವಿ ಮಾಡಿದರು.ಪಟ್ಟಣದಲ್ಲಿ ಉದ್ಭವಿಸಿರುವ ಕುಡಿವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜೆಸ್ಕಾಂ ಮತ್ತು ಪುರಸಭೆ ಅಧಿಕಾರಿಗಳ ಸಭೆ ಕರೆದಿದ್ದೇನೆ. ನದಿಯಲ್ಲಿ ನೀರು ಇಲ್ಲದಿರುವುದರಿಂದ ಜಾಕ್‌ವೆಲ್‌ಗೆ ನೀರು ಬರುತ್ತಿಲ್ಲ. ಜಲಾಶಯದಿಂದ ನದಿಗೆ ನೀರು ಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಶನಿವಾರ ತಡರಾತ್ರಿ ನದಿಗೆ ನೀರು ಬಿಡಲಾಗುತ್ತಿದೆ ಎಂದು ತಿಳಿಸಿದರು.ತಹಸೀಲ್ದಾರ್ ಮಹ್ಮದ್ ಗೌಸುದ್ದೀನ್ ಅವರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.