ಮಾಸ್ತಿ ಸಾಹಿತ್ಯ- ಬದುಕು ಆದರ್ಶ

ಗುರುವಾರ , ಜೂಲೈ 18, 2019
28 °C

ಮಾಸ್ತಿ ಸಾಹಿತ್ಯ- ಬದುಕು ಆದರ್ಶ

Published:
Updated:

ಮಾಲೂರು: ಡಾ. ಮಾಸ್ತಿ ಸಾಹಿತ್ಯ ಹಾಗೂ ವ್ಯಕ್ತಿತ್ವ ಶ್ರೇಷ್ಠವಾದುದ್ದು, ಜೀವನ ಪ್ರೀತಿ ಆದರ್ಶಪ್ರಾಯ ಎಂದು ಕವಿ ದುಂಡಿರಾಜ್ ಹೇಳಿದರು.ತಾಲ್ಲೂಕಿನ ಮಾಸ್ತಿ ಗ್ರಾಮದಲ್ಲಿ ಡಾ.ಮಾಸ್ತಿ ಟ್ರಸ್ಟ್ ಹಾಗೂ ತಾಲ್ಲೂಕು ಕಸಾಪ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಡಾ. ಮಾಸ್ತಿ 120ನೇ ಜಯಂತಿಯಲ್ಲಿ ಮಾತನಾಡಿ, ಸಣ್ಣ ಕಥೆಗಳ ಜನಕ ಮಾಸ್ತಿ ಸಾಹಿತ್ಯ ಮತ್ತು ಬದುಕು ಆದರ್ಶಪ್ರಾಯ ಎಂದು ನುಡಿದರು.ಖ್ಯಾತ ಸಾಹಿತಿ ಬಿ.ಆರ್.ಲಕ್ಷ್ಮಣ್‌ರಾವ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಎ.ಅಶ್ವತ್ಥರೆಡ್ಡಿ, ಡಾ. ಮಾಸ್ತಿ ಟ್ರಸ್ಟ್ ಅಧ್ಯಕ್ಷ ಮಾವಿನಕೆರೆ ರಂಗನಾಥನ್, ಮಾಸ್ತಿ ಮೊಮ್ಮಗಳಾದ ಉಷಾ ಕೇಸರಿ, ತಹಶೀಲ್ದಾರ್ ಜಿ.ವಿ.ನಾಗರಾಜ್, ಸಾಹಿತಿ ಸ.ರಘುನಾಥ್, ವೇಣುಗೋಪಾಲ್ ವಹ್ನಿ, ಪಣಸಮಾಕನಹಳ್ಳಿ ಚೌಡರೆಡ್ಡಿ, ಗೊಲ್ಲಹಳ್ಳಿ ಶಿವಪ್ರಸಾದ್, ಪಿಚ್ಚಳ್ಳಿ ಶ್ರೀನಿವಾಸ್, ಲಕ್ಕೂರು ಆನಂದ, ಮಾಸ್ತಿ ಕೃಷ್ಣಪ್ಪ, ವೆಂಕಟಾಪು ಸತ್ಯಂ, ಜ.ಮು.ಚಂದ್ರ, ಗಂಗಪ್ಪ ಭಾಗವಹಿಸಿದ್ದರು.ವಸತಿ ಶಾಲೆಗಳಲ್ಲಿ ವಂಚನೆ

ಮಾಲೂರು ತಾಲ್ಲೂಕಿನ ವಸತಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಬಗ್ಗೆ ಸರಿಯಾದ ಮಾಹಿತಿ ನೀಡದೆ ಅಧಿಕಾರಿಗಳು ವಂಚಿಸುತ್ತಿದ್ದಾರೆ ಎಂದು ತಾ.ಪಂ. ಅಧ್ಯಕ್ಷ ಆನಂದ್ ಆರೋಪಿಸಿದರು.ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸರ್ಕಾರದಿಂದ ಬರುವ ಅನುದಾನವನ್ನು ಮಕ್ಕಳಿಗೆ ಸಮಪರ್ಕಕವಾಗಿ ವಿತರಿಸುತ್ತಿಲ್ಲ. 2007ರಿಂದ 09ನೇ ಸಾಲಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಂಜೂರಾಗಿದ್ದು, ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ ಆಯಾ ಶಾಲೆಗಳ ಮುಖ್ಯ ಶಿಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸುವಂತೆ ಸೂಚಿಸಿದರು.ತಾ.ಪಂ. ಉಪಾಧ್ಯಕ್ಷೆ ಪಾರ್ವತಮ್ಮ ಸ್ವಾಮಿ, ಕಾರ್ಯನಿರ್ವಹಣಾಧಿಕಾರಿ ರಾಮಕೃಷ್ಣಪ್ಪ, ಬಿಇಒ ವೆಂಕಟರಾಮರೆಡ್ಡಿ, ಸಹಾಯಕ ಕೃಷಿ ನಿರ್ದೇಶಕ ರಂಗಸ್ವಾಮಿ ಮುಂತಾದವರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry