ಸೋಮವಾರ, ಆಗಸ್ಟ್ 26, 2019
21 °C
ಯುಪಿಎಸ್‌ಸಿ: ಪೂರ್ವಭಾವಿ ಪರೀಕ್ಷೆ ಫಲಿತಾಂಶ ಪ್ರಕಟ

`ಮಾಹಿತಿಗಾಗಿ ಆರ್‌ಟಿಐ ಅರ್ಜಿ ಹಾಕಬೇಡಿ'

Published:
Updated:

ನವದೆಹಲಿ (ಪಿಟಿಐ): ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ತನ್ನ ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು, ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳು ತಮ್ಮ ಫಲಿತಾಂಶದ ವಿವರ ಅರಿಯಲು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಬಳಸಬಾರದು ಎಂದು ಮನವಿ ಮಾಡಿದೆ.ಯುಪಿಎಸ್‌ಸಿ ಪರೀಕ್ಷೆಯ ಪೂರ್ಣಕ್ರಿಯೆ ಮುಗಿಯುವ ತನಕ ಅಭ್ಯರ್ಥಿಗಳು ಯಾವುದೇ ಕಾರಣಕ್ಕೂ ತಮ್ಮ ಅಂಕಗಳ ವಿವರ, ಉತ್ತರಗಳ ವಿವರ ಅರಿಯಲು ಆರ್‌ಟಿಐನ್ನು ಬಳಸಬಾರದು ಎಂದು ಯುಪಿಎಸ್‌ಸಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.ಐಎಎಸ್, ಐಪಿಎಸ್, ಐಎಫ್‌ಎಸ್ ಸೇರಿದಂತೆ ಇತರ ನಾಗರಿಕ ಸೇವೆಗಳಿಗಾಗಿ ಯುಪಿಎಸ್‌ಸಿ ಮೇ 26ರಂದು ಪೂರ್ವ ಭಾವಿ ಪರೀಕ್ಷೆ ನಡೆಸಿತ್ತು. ಪರೀಕ್ಷೆ ಬರೆದ 16 ಸಾವಿರ ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ಬರೆಹಲು ಅರ್ಹತೆ ಪಡೆದಿದ್ದು, ಶನಿವಾರ ತಡರಾತ್ರಿ ಫಲಿತಾಂಶ ಪ್ರಕಟವಾಗಿದೆ.ಯುಪಿಎಸ್‌ಸಿ ಪರೀಕ್ಷೆ ಪ್ರಕ್ರಿಯೆಗಳು ಸಂಪೂರ್ಣವಾಗಿ ಮುಗಿದ ನಂತರವೇ ಅಭ್ಯರ್ಥಿಗಳಿಗೆ ಪಡೆದ ಅಂಕಗಳು, ಉತ್ತರ ಮತ್ತಿತರ ಮಾಹಿತಿಗಳನ್ನು ಅಭ್ಯರ್ಥಿಗಳಿಗೆ ಒದಗಿಸಲಾಗುವುದು ಎಂದು ಯುಪಿಎಸ್‌ಸಿ ತಿಳಿಸಿದೆ. ಪೂರ್ವಭಾವಿ ಪರೀಕ್ಷೆಯಲ್ಲಿ ಪಾಸಾದವರು, ಮುಖ್ಯ ಪರೀಕ್ಷೆಗೆ ಆನ್‌ಲೈನ್‌ನಲ್ಲಿ ಆಗಸ್ಟ್ 20ರಿಂದ ಸೆಪ್ಟೆಂಬರ್ 10ರ ಒಳಗೆ ಅಜಿ(ಡಿಎಎಫ್) ಸಲ್ಲಿಸಬೇಕು.ಅಭ್ಯರ್ಥಿಗಳು ಫಲಿತಾಂಶದ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಯುಪಿಎಸ್‌ಸಿ ಕಚೇರಿಯನ್ನು ಬೆಳಿಗ್ಗೆ 10ರಿಂದ ಸಂಜೆ 5ರ ಒಳಗೆ ಖುದ್ದಾಗಿ ಭೇಟಿ ನೀಡಬಹುದು. ಇಲ್ಲವೇ ದೂರವಾಣಿ ಸಂಖ್ಯೆ: 011-23098543, 23381125ಗೆ ಸಂಪರ್ಕಿಸಬಹುದು.

Post Comments (+)