ಮಾಹಿತಿದಾರ ಹೆಸರು ಬಹಿರಂಗಕ್ಕೆ ನಕಾರ

7
ಸಿಬಿಐ ನಿರ್ದೇಶಕ ಸಿನ್ಹಾ ಮೇಲಿನ ಆರೋಪ

ಮಾಹಿತಿದಾರ ಹೆಸರು ಬಹಿರಂಗಕ್ಕೆ ನಕಾರ

Published:
Updated:

ನವದೆಹಲಿ (ಪಿಟಿಐ): ಸಿಬಿಐ ನಿರ್ದೇಶಕ ರಂಜಿತ್‌ ಸಿನ್ಹಾ, ‘2ಜಿ’ ಹಾಗೂ ಕಲ್ಲಿದ್ದಲು ಹಗರಣದ ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ದೂರು ನೀಡಿರುವ ಸರ್ಕಾರೇತರ ಸಂಸ್ಥೆಯು (ಎನ್‌ಜಿಒ)  ಈ ಅಕ್ರಮ ಬಯಲಿಗೆಳೆದ  ಸಾಮಾಜಿಕ ಕಾರ್ಯ­ಕರ್ತರ ಹೆಸರು ಬಹಿರಂಗಪಡಿಸಲು ನಿರಾಕರಿಸಿದೆ.ಈ ದಾಖಲೆಗಳನ್ನು ಒದಗಿಸಿರುವವರ ಹೆಸರು ಬಹಿರಂಗಪಡಿಸಿದಲ್ಲಿ ಹಲವರ ಜೀವಕ್ಕೆ ಅಪಾಯವಾಗುವ ಸಾಧ್ಯತೆ­ಯಿದೆ ಎಂದು ಸರ್ಕಾರೇತರ ಸಂಸ್ಥೆ ‘ಸೆಂಟರ್‌ ಫಾರ್‌ ಪಬ್ಲಿಕ್‌ ಇಂಟರೆಸ್ಟ್‌ ಲಿಟಿಗೇಷನ್‌’ (ಸಿಪಿಐಎಲ್‌) ಹೇಳಿದೆ.ಹೀಗೆ ಹೆಸರು ಬಹಿರಂಗಪಡಿಸು­ವುದರಿಂದ ವಿಶ್ವಾಸ ದ್ರೋಹ ಮಾಡಿ­ದಂತಾಗುತ್ತದೆ. ಅಲ್ಲದೇ ಆ ವ್ಯಕ್ತಿಗಳು ದೈಹಿಕ, ಮಾನಸಿಕ ಹಿಂಸೆಗೆ  ಒಳಗಾಗುವ ಸಾಧ್ಯತೆ­ಯಿದೆ. ಈ ವಿಚಾರಕ್ಕೆ ಸಂಬಂಧಿ­ಸಿದಂತೆ ಬುಧವಾರ ಸಭೆ ಸೇರಿದ್ದ ‘ಸಿಪಿಐಎಲ್‌’ ಆಡಳಿತ ಮಂಡಳಿ ಸಭೆ­ಯಲ್ಲಿ ಹೆಸರು ಬಹಿರಂಗ­ಪಡಿಸ­ದಿರಲು ನಿರ್ಧರಿಸ­ಲಾಯಿತು ಎಂದು ‘ಸಿಪಿಐಎಲ್‌’ ಪರ ವಕೀಲ ಪ್ರಶಾಂತ್‌ ಭೂಷಣ್‌ ಸುಪ್ರೀಂ­ಕೋರ್ಟ್‌ಗೆ ಗುರುವಾರ ತಿಳಿಸಿದರು.ಬಿಹಾರ­ದಲ್ಲಿ ರಸ್ತೆ ಹಗರಣ ಬಯಲಿಗೆಳೆದು ಕೊಲೆಗೀಡಾದ ಸತ್ಯೇಂದ್ರ ದುಬೆ ಸೇರಿ­ದಂತೆ ಭ್ರಷ್ಟಾಚಾರ ಪ್ರಕರಣ­ಗಳನ್ನು ಬಹಿ­ರಂಗಪಡಿಸಿ ಹತ್ಯೆಗೆ ಒಳಗಾದ ಹಲವರ ಹೆಸರುಗಳನ್ನು ಭೂಷಣ್‌ ಉದಾಹರಿ­ಸಿದರು.

ಅಕ್ರಮ ಬಯಲಿಗೆಳೆಯುವವರ ಸುರ­ಕ್ಷತಾ ಕಾಯ್ದೆಯಲ್ಲಿಯೂ ಅಕ್ರಮಗಳ ಮಾಹಿತಿ ನೀಡುವವರ ಗುರುತು

ಬಹಿ­ರಂಗ­­ಪಡಿಸಬಾರದು ಎಂದು ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry