ಮಾಹಿತಿ ಆಗರ ಇನ್ಫೋಸಿಸ್ ಕೇಂದ್ರ

ಶುಕ್ರವಾರ, ಜೂಲೈ 19, 2019
24 °C

ಮಾಹಿತಿ ಆಗರ ಇನ್ಫೋಸಿಸ್ ಕೇಂದ್ರ

Published:
Updated:

ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯ ಅವರು ತಮ್ಮನ್ನು ಭೇಟಿಯಾಗುತ್ತಿದ್ದ ಆಪ್ತರನ್ನು `ಪ್ರಶ್ನಿಸದೇ ಒಪ್ಪಬೇಡಿ~ ಎಂಬ ಮಾತನ್ನು  ಹೇಳುತ್ತಿದ್ದರು. ವಿಜ್ಞಾನ- ವಿಚಾರ ಸೇರಿದಂತೆ ಹಲವು ಸಂಗತಿಗಳನ್ನು ಚರ್ಚಿಸುತ್ತಿದ್ದ ಅವರು ಪ್ರತಿಯೊಬ್ಬರಲ್ಲೂ ಪ್ರಶ್ನಿಸುವ ಮನೋಭಾವ ಮೂಡಿಸಲು ಯತ್ನಿಸುತ್ತಿದ್ದರು.ತಾಲ್ಲೂಕಿನ ಸ್ವಗ್ರಾಮವಾದ ಹೊಸೂರಿನಲ್ಲೂ ಇಂಥದ್ದೇ ವಿಶಿಷ್ಟ ಕಾರ್ಯಕ್ಕೆ ಡಾ.ಎಚ್.ನರಸಿಂಹಯ್ಯ ಅವರು ಹತ್ತು ವರ್ಷಗಳ ಹಿಂದೆಯೇ ಚಾಲನೆ ನೀಡಿದ್ದರು. ಡಾ. ಎಚ್.ಎನ್.ಪ್ರೌಢಶಾಲೆ ಆವರಣದಲ್ಲಿ ಇನ್ಫೋಸಿಸ್ ವಿಜ್ಞಾನ ಕೇಂದ್ರವನ್ನು ಆರಂಭಿಸಿ, ಶಾಲಾ ಹಂತದಲ್ಲೇ ಮಕ್ಕಳಲ್ಲಿ ವಿಜ್ಞಾನದ ಕುರಿತು ಆಸಕ್ತಿ ಮೂಡಿಸಿದ್ದರು.

ಈ ವಿಜ್ಞಾನ ಕೇಂದ್ರ ಪ್ರವೇಶಿಸುವಾಗ ಕಾಣಸಿಗುವ ಮೊದಲ ವಾಕ್ಯ `ಪ್ರಶ್ನಿಸದೇ ಒಪ್ಪಬೇಡಿ~. ಇದನ್ನು ಓದಿ ಕೇಂದ್ರದ ವೀಕ್ಷಣೆಗೆ ಒಳಗಡೆ ಹೆಜೆಯಿಟ್ಟರೆ, ವಿಜ್ಞಾನದ ಹಲವು ವಿಷಯಗಳು ಗೋಚರವಾಗತೊಡಗುತ್ತವೆ.ಒಂದೆಡೆ ಉಪಗ್ರಹಗಳು, ಮತ್ತೊಂದೆಡೆ ಸೌರಮಂಡಲ. ಒಂದು ಮೂಲೆಯಲ್ಲಿ ಭೂಮಿಯಲ್ಲಿ ಗೋಲಾಕಾರದ ಭೂಮಿಯ ಮಾದರಿ, ಮತ್ತೊಂದೆಡೆ ಹೊಸ ಸಂಗತಿಗಳನ್ನು ಪರಿಚಯಿಸುವ ವಿಜ್ಞಾನದ ವಸ್ತುಗಳು.ಗ್ರಾಮೀಣ ಪ್ರದೇಶದ ಮಕ್ಕಳು ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲೇ ವಿಜ್ಞಾನದ ಕುರಿತು ಆಸಕ್ತಿ ಮೂಡಿಸಿಕೊಳ್ಳಬೇಕು ಎಂಬ ಆಶಯ ಡಾ. ಎಚ್.ಎನ್.ಅವರದ್ದಾಗಿತ್ತು. ಈ ಕಾರಣದಿಂದಲೇ ವಿಶಿಷ್ಟವಾದ ವಿಜ್ಞಾನ ಕೇಂದ್ರಕ್ಕೆ ಅವರು ಚಾಲನೆ ನೀಡಿದರು. ಕೇಂದ್ರದ ನಿರ್ಮಾಣಕ್ಕೆ ಒಟ್ಟಾರೆ 60 ಲಕ್ಷ ರೂಪಾಯಿ ವೆಚ್ಚವಾಯಿತು. ಇನ್ಫೋಸಿಸ್ ಸಂಸ್ಥೆ ಸಂಸ್ಥಾಪಕರಾದ ನಾರಾಯಣಮೂರ್ತಿ ಮತ್ತು ಸುಧಾ ನಾರಾಯಣಮೂರ್ತಿ ದಂಪತಿ ಕೇಂದ್ರದ ನಿರ್ಮಾಣಕ್ಕೆ 20 ಲಕ್ಷ ರೂಪಾಯಿ ದಾನವಾಗಿ ನೀಡಿದ್ದರು. ಈ ಕಾರಣದಿಂದಲೇ ಕೇಂದ್ರವು ಇನ್ಫೋಸಿಸ್ ವಿಜ್ಞಾನ ಕೇಂದ್ರ ಎಂದು ಕರೆಯಲ್ಪಟ್ಟಿತು.ಏನೇನು ಇವೆ ಕೇಂದ್ರದಲ್ಲಿ? ವಿಜ್ಞಾನದ ಹಲವ ಮಜಲುಗಳನ್ನು ಕೇಂದ್ರವು ತರೆಡುತ್ತದೆ. ಭೌತಿಕ, ರಸಾಯನಿಕ, ಖಗೋಳ, ಭೂಗರ್ಭ, ಜೀವ ವೃಕ್ಷ, ಗಣಿತ ಶಾಸ್ತ್ರಗಳಿಗೆ ಸಂಬಂಧಪಟ್ಟ ಹಲವು ವಸ್ತುಗಳು ಇವೆ. ಅವುಗಳಿಂದ ಉಪಯುಕ್ತ ಮಾಹಿತಿಪಡೆದುಕೊಳ್ಳಬಹುದು.ಜಿಎಸ್‌ಎಲ್‌ವಿ, ಪಿಎಸ್‌ಎಲ್‌ವಿ, ಎಸ್‌ಎಲ್‌ವಿ, ಎಎಸ್‌ಎಲ್‌ವಿ ಮುಂತಾದ ಉಪಗ್ರಹ ಉಡಾವಣಾ ವಾಹನಳು, ಬಾಹ್ಯಾಕಾಶ ನೌಕೆಯ ಮಾದರಿಗಳು ಮುಂತಾದವುಗಳನ್ನು ಇಲ್ಲಿ ನೋಡಬಹುದು. ರೋಹಿಣಿ, ಆರ್ಯಭಟ್ಟ ಸೇರಿದಂತೆ ಇತರ ಇತರ ಉಪಗ್ರಹಗಳ ಬಗ್ಗೆ ಮಾಹಿತಿ ಸಂಗ್ರಹಿಸಬಹುದು.ಮನುಷ್ಯನ ದೇಹ ರಚನೆ, ರಕ್ತ ಸಂಚಲನ, ದೇಹದ ವಿವಿಧ ಭಾಗಗಳ ಕಾರ್ಯನಿರ್ವಹಣೆ ಮುಂತಾದವುಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಬಹುದು. ಕೇಂದ್ರದಲ್ಲಿ ವಿವಿಧ ವಿಷಯಗಳ ಕುರಿತ ಅಪರೂಪದ ಚಿತ್ರಗಳೂ ಸಹ ಇವೆ.ಎರಡು ತಲೆ ಶಿಶು, ಆಕಾಶದ ಓಜೋನ್ ಪದರ, ಮಾಯಾಹೂವಿನ ಚಮತ್ಕಾರ ಮಾದರಿ, ಸೂಕ್ಷ್ಮವೀಕ್ಞಣಾ ಗ್ರಾಹಕ (ಮೈಕ್ರೊಸ್ಕೋಪ್), ಸೂರ್ಯ ಗ್ರಹಣ, ಚಂದ್ರ ಗ್ರಹಣ, ನಕ್ಷತ್ರಗಳು ಮುಂತಾದವುಗಳ ಚಿತ್ರಗಳನ್ನು ನೋಡಬಹುದು. ನೃತ್ಯದ ಚೆಂಡು, ಪೈಪ್ ಸಂಗೀತ ಸೇರಿದಂತೆ ವಿಜ್ಞಾನದ ಹಲವು ಕೌತುಕದ ವಿಷಯಗಳನ್ನು ತಿಳಿದುಕೊಳ್ಳಬಹುದು.ಶಾಲೆಯ ಮುಖ್ಯ ಶಿಕ್ಷಕ ರಾಮಾಂಜಿನಪ್ಪ, ವಿಜ್ಷಾನ ಶಿಕ್ಷಕರಾದ ಎಚ್.ವಿ.ವೆಂಕಟೇಶ್, ಸಿದ್ದರಾಮಯ್ಯ ಅವರು ಕೇಂದ್ರಕ್ಕೆ ವಿಜ್ಞಾನ ಅಸಕ್ತರಿಗೆ ಅಗತ್ಯ ಮಾರ್ಗದರ್ಶನ ನೀಡುತ್ತಾರೆ. ತಾಲ್ಲೂಕಿನ ಸುತ್ತಮುತ್ತಲಿನ ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ಕೇಂದ್ರಕ್ಕೆ ಆಗಾಗ್ಗೆ ಭೇಟಿ ನೀಡುತ್ತಾರೆ. ಉಚಿತ ಪ್ರವೇಶ

ಕೇಂದ್ರಕ್ಕೆ ಉಚಿತ ಪ್ರವೇಶವಿದೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ಕೇಂದ್ರಕ್ಕೆ ಭೇಟಿ ನೀಡಬಹುದು. ಕೇಂದ್ರದಿಂದ ಸುಮಾರು ಎರಡು  ಕಿ.ಮೀ. ದೂರದಲ್ಲಿ ಭೂಕಂಪ ಮಾಪಕ ಮತ್ತು ಸಂಶೋಧನಾ ಕೇಂದ್ರವಿದೆ. ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿರುವ ಮತ್ತು ಭದ್ರತೆಯ ದೃಷ್ಟಿಯಿಂದ ಭೂಕಂಪ ಮಾಪಕ ಕೇಂದ್ರಕ್ಕೆ ಪ್ರವೇಶ ನಿಷೇಧಿಸಲಾಗಿದೆ. ದೂರದಿಂದಲೇ ಕೇಂದ್ರದ ಹೊರ ಆವರಣವನ್ನು ವೀಕ್ಷಿಸಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry