ಮಾಹಿತಿ ಆಯೋಗಕ್ಕೆ ಕಟ್ಟಡ

7

ಮಾಹಿತಿ ಆಯೋಗಕ್ಕೆ ಕಟ್ಟಡ

Published:
Updated:

 


ಬೆಂಗಳೂರು: ಕರ್ನಾಟಕ ಮಾಹಿತಿ ಆಯೋಗಕ್ಕೆ ಪ್ರತ್ಯೇಕವಾದ ಬೃಹತ್ ಕಟ್ಟಡ ತಲೆ ಎತ್ತಲಿದೆ. ಇಲ್ಲಿಯವರೆಗೂ ಎರಡು ಕಟ್ಟಡಗಳಲ್ಲಿ ಹಂಚಿ ಹೋಗಿದ್ದ ಆಯೋಗದ ಕಚೇರಿಗಳು ಇದರಿಂದಾಗಿ ಮುಂದೆ ಒಂದೇ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲಿವೆ. ಕಟ್ಟಡ ನಿರ್ಮಾಣ ಕಾಮಗಾರಿಗೆ ಗುರುವಾರ ಚಾಲನೆ ದೊರೆತಿದ್ದು, ಎರಡು ವರ್ಷಗಳಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ. 

 

ಬಹುಮಹಡಿ ಕಟ್ಟಡದ 5ನೇ ಹಂತದಲ್ಲಿ ಒಟ್ಟು 3,013 ಚ.ಮೀ. ವಿಸ್ತಿರ್ಣದಲ್ಲಿ ನಿರ್ಮಾಣವಾಗುವ ಕಟ್ಟಡದ ಅಂದಾಜು ವೆಚ್ಚ 17 ಕೋಟಿ ರೂಪಾಯಿ. ತಳಮಹಡಿ ಹಾಗೂ ನೆಲಮಹಡಿ ಸೇರಿದಂತೆ ಒಟ್ಟು ಐದು ಮಹಡಿಗಳ ನೀಲನಕ್ಷೆ ತಯಾರಿಸಲಾಗಿದೆ ಎಂದು ಆಯೋಗದ ಕಾರ್ಯದರ್ಶಿ ಎನ್.ಜಯದೇವ `ಪ್ರಜಾವಾಣಿ'ಗೆ ತಿಳಿಸಿದರು.

 

ತಳಮಹಡಿಯಲ್ಲಿ ವಾಹನ ನಿಲುಗಡೆ, ನೆಲಮಹಡಿಯಲ್ಲಿ ಮಾಹಿತಿ ಆಯುಕ್ತರ ಎರಡು ಕೊಠಡಿಗಳು ಮತ್ತು ಎರಡು ಕೋರ್ಟ್ ಹಾಲ್‌ಗಳು ಇರುತ್ತವೆ. 2ನೇ ಮತ್ತು 3ನೇ ಮಹಡಿಯಲ್ಲಿ ಮಾಹಿತಿ ಆಯುಕ್ತರ ಕೊಠಡಿಗಳು, ಎರಡು ಕೋರ್ಟ್ ಹಾಲ್‌ಗಳು, ಎರಡು ಕಚೇರಿಗಳು ಹಾಗೂ ಒಂದು ನ್ಯಾಯಾಂಗ ಶಾಖೆ ಕೊಠಡಿ ಇರುತ್ತವೆ.

 

ಮಾಹಿತಿ ಆಯೋಗಕ್ಕೆ ಸರಿಯಾದ ಸ್ಥಳಾವಕಾಶವೇ ಇರಲಿಲ್ಲ. ಮೂರು ಜನ ಆಯುಕ್ತರು ಬಹುಮಹಡಿ ಕಟ್ಟಡದಲ್ಲಿ, ಇನ್ನೂ ಮೂರು ಆಯುಕ್ತರು ಮಿಥಿಕ್ ಸೊಸೈಟಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಆಯೋಗಕ್ಕೆ ಪ್ರತ್ಯೇಕ ಕಟ್ಟಡದ ಅಗತ್ಯವಿದೆ ಎಂದು ಮೂರು ವರ್ಷಗಳ ಹಿಂದೆಯೇ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಇದೀಗ ಕಟ್ಟಡ ಕಾಮಗಾರಿ ಆರಂಭವಾಗಿದ್ದು, ಈಗಾಗಲೇ 7.5 ಕೋಟಿ ರೂಪಾಯಿ ಮಂಜೂರಾಗಿದೆ ಎಂದು ವಿವರಿಸಿದರು.

 

ಕಟ್ಟಡ ಕಾಮಗಾರಿಗೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಗುರುವಾರ ಶಿಲಾನ್ಯಾಸ ನೆರವೇರಿಸಿದರು. ಶಾಸಕ ರೋಷನ್ ಬೇಗ್ ಅಧ್ಯಕ್ಷತೆ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry