ಶುಕ್ರವಾರ, ಜೂನ್ 25, 2021
30 °C

ಮಾಹಿತಿ ಕೊರತೆಯಿಂದ ಸಮಸ್ಯೆ ಸೃಷ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಅಕ್ಷರಸ್ಥರಿಗೆ ವೈಜ್ಞಾನಿಕ ದೃಷ್ಟಿಕೋನವನ್ನು ಶಿಕ್ಷಣದ ಮೂಲಕ ನೀಡುವಂತೆ, ಗ್ರಾಮೀಣ ಭಾಗದಲ್ಲಿರುವ ಅನಕ್ಷರಸ್ಥರಲ್ಲೂ ವೈಜ್ಞಾನಿಕ ಮನೋಭಾವ ಬೆಳೆಸಲು ಸಾಧ್ಯವಾಗಬೇಕಿದೆ~ ಎಂದು ಸೀಡ್ ಮೀಡಿಯಾ ಸಮೂಹದ ಕಾರ್ಯನಿರ್ವಾಹಕ ಅಧಿಕಾರಿ ಆ್ಯಡಂ ಬ್ಲೈ ಹೇಳಿದರು.ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ `ವೈಜ್ಞಾನಿಕ ಚಿಂತನೆ~ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಆಹಾರ ಪೂರೈಕೆ ಮತ್ತು ನೀರು ಸರಬರಾಜು ವ್ಯವಸ್ಥೆಯಲ್ಲಿನ ದೂರದೃಷ್ಟಿ ಕೋನದ ವೈಫಲ್ಯದಿಂದ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಮತ್ತು ನೀರು ಪೂರೈಸಲಾಗುತ್ತಿಲ್ಲ. ಇದರಿಂದ ಅಪೌಷ್ಟಿಕತೆ ಸೇರಿದಂತೆ ಹಲವು ಸಮಸ್ಯೆಗಳು ಉದ್ಭವಿಸುತ್ತಿವೆ~ ಎಂದು ಅಭಿಪ್ರಾಯಪಟ್ಟರು.`ಸಮರ್ಪಕ ವೈಜ್ಞಾನಿಕ ದೃಷ್ಟಿಕೋನ ಇಲ್ಲದೇ ಇರುವುದರಿಂದ ಹವಾಮಾನ, ವಾಣಿಜ್ಯ, ಹಣಕಾಸು ಸೇರಿದಂತೆ ಎಲ್ಲ ವಲಯಗಳಲ್ಲೂ  ಹೊಸ ಸಮಸ್ಯೆಗಳು ಸೃಷ್ಟಿಯಾಗುತ್ತಿದ್ದು, ವೈಜ್ಞಾನಿಕ ಮನೋಭಾವದ ಕ್ರಾಂತಿಯಾಗಬೇಕು~ ಎಂದ ಅವರು, `ರಾಜಕೀಯವಂತೂ ವೈಜ್ಞಾನಿಕತೆಯಿಂದ ದೂರ ಉಳಿದಿದೆ. ದೂರದೃಷಿಯೇ ಇಲ್ಲವೆಂಬಂತೆ ವರ್ತಿಸುವ ರಾಜಕಾರಣಿಗಳಿಗೆ ಸೂಕ್ತ ಶೈಕ್ಷಣಿಕ ಮಾರ್ಗದರ್ಶನದ ಅಗತ್ಯವಿದೆ~ ಎಂದು ಹೇಳಿದರು.`ಸಾಮಾಜಿಕ ಅಧ್ಯಯನದಲ್ಲಿ ಸಾಂಸ್ಕೃತಿಕ ವೈವಿಧ್ಯವೆಂಬುದು ಕುತೂಹಲಕಾರಿ ಅಧ್ಯಯನ ವಿಷಯವಾಗಿದ್ದು, ವಿವಿಧ ಸಾಂಸ್ಕೃತಿಕ ಘಟಕಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ಅದರ ಒಳ ವಿಚಾರಗಳೇನೆಂಬುದನ್ನು ಅರ್ಥೈಸಿಕೊಳ್ಳಬೇಕು. ಆಗ ಸುಸ್ಥಿರ ಸಮಾಜವನ್ನು ರೂಪಿಸಲು ಸಾಧ್ಯವಿದೆ~ ಎಂದು ಹೇಳಿದರು. ಸೆಂಟರ್‌ನ ಪ್ರೊ.ರಾಮಮೂರ್ತಿ ಇತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.