`ಮಾಹಿತಿ ಕೊರತೆ ಕೃಷಿ ಅಭಿವೃದ್ಧಿಗೆ ಮಾರಕ'

7

`ಮಾಹಿತಿ ಕೊರತೆ ಕೃಷಿ ಅಭಿವೃದ್ಧಿಗೆ ಮಾರಕ'

Published:
Updated:

ಮೂಡಿಗೆರೆ: ಬಹುತೇಕ ರೈತರಿಗೆ ತಮ್ಮ ಬೆಳೆಯ ಬಗ್ಗೆ ಮಾಹಿತಿ ಇಲ್ಲದಿರುವುದು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಮಾರಕ ವಾಗುತ್ತಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಅರವಿಂದ ಭೂತನಕಾಡು ಅಭಿಪ್ರಾಯಪಟ್ಟರು.ಪಟ್ಟಣದ ಹ್ಯಾಂಡ್‌ಪೋಸ್ಟಿನಲ್ಲಿರುವ ವಲಯ ಕೃಷಿ ಸಂಶೋಧನಾ ಕೇಂದ್ರ ದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬ್ಲ್ಯಾಕ್ ಗೋಲ್ಡ್ ಲೀಗಲ್ (ಬಿಜಿಎಲ್) ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಎಲ್ಲಾ ಬೆಳೆಗಾರರು ತಮ್ಮ ತೋಟಗಳಲ್ಲಿ ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲು ಶ್ರಮವಹಿಸಿ ದುಡಿಯುತ್ತಾರೆ, ಆದರೆ ತಾವು ಬೆಳೆಯುತ್ತಿರುವ ಬೆಳೆಗಳ ಬಗ್ಗೆ ಮಾಹಿತಿ ಪಡೆದು ಕೊಳ್ಳಲು ವಿಫಲರಾಗುತ್ತಿರುವುದು ಕೃಷಿ ಕ್ಷೇತ್ರ ಹಿಂದುಳಿಯಲು ಕಾರಣವಾ ಗುತ್ತಿದೆ. ಮಾಹಿತಿ ಕೊರತೆಯಿಂದಾಗಿ ವಿವಿಧ ಬೆಳೆಗಳಿಗೆ ಏಕ ಪ್ರಕಾರದ ಆರೈಕೆ ಮಾಡುವುದನ್ನೆ ರೂಢಿಸಿಕೊಳ್ಳಲಾ ಗುತ್ತಿರುವುದು ಬೆಳೆಗಳಲ್ಲಿ ಇಳುವರಿ ಕಡಿಮೆಯಾಗಲು ಕಾರಣವಾಗುತ್ತದೆ ಎಂದರು. ಬಿಜಿಎಲ್ ಘಟಕದ ಪದಾಧಿಕಾರಿ ಎಂ.ಜೆ. ದೇವೃಂದ ದಿನೇಶ್ ಮಾತ ನಾಡಿ, ರೈತನಿಂದ ರೈತರಿಗೆ ಮಾಹಿತಿ ನೀಡುವುದೇ ಬಿಜಿಎಲ್ ಘಟಕದ ಮೂಲ ಉದ್ದೇಶವಾಗಿದೆ. ಇಂತಹ ಕಾರ್ಯಕ್ರಮಗಳು ಕೇವಲ ಒಂದೇ ದಿನಕ್ಕೆ ಸೀಮಿತವಾಗದೇ, ತಿಂಗಳಿಗೆ ಒಮ್ಮೆಯಾದರೂ ಬೇರೆ-ಬೇರೆ ಪ್ರದೇಶಗಳಿಂದ ರೈತರನ್ನು, ವಿಜ್ಞಾನಿಗಳನ್ನು ಕರೆತಂದು ಉಪಯುಕ್ತ ಮಾಹಿತಿ ಒದ ಗಿಸಿ ಕೃಷಿ ಬೆಳವಣಿಗೆಗೆ ಪ್ರಯತ್ನಿಸಬೇಕು ಎಂದರು.ಹಿರಿಯ ವಿಜ್ಞಾನಿ ಡಾ. ಸತ್ಯನಾರಾಯಣ ರೆಡ್ಡಿ, ಕಾರ್ಯಕ್ರಮ ಸಂಯೋಜಕಿ ಡಾ. ಸುಕನ್ಯ, ಕೆಂಜಿಗೆ ಕೇಶವ್, ಡಾ. ಸುನೀಲ್, ನವೀನ್ ಮುಂತಾದವರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry