ಮಾಹಿತಿ ತಂತ್ರಜ್ಞಾನದಿಂದ ಪ್ರಕರಣ ತ್ವರಿತ ವಿಲೇವಾರಿ

7

ಮಾಹಿತಿ ತಂತ್ರಜ್ಞಾನದಿಂದ ಪ್ರಕರಣ ತ್ವರಿತ ವಿಲೇವಾರಿ

Published:
Updated:
ಮಾಹಿತಿ ತಂತ್ರಜ್ಞಾನದಿಂದ ಪ್ರಕರಣ ತ್ವರಿತ ವಿಲೇವಾರಿ

ಬೆಂಗಳೂರು: ಮಾಹಿತಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದರಿಂದ ಪ್ರಕರಣಗಳ ತ್ವರಿತ ವಿಲೇವಾರಿ ಸಾಧ್ಯ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್. ರಾಜೇಂದ್ರ ಬಾಬು ಅಭಿಪ್ರಾಯಪಟ್ಟರು.ಕರ್ನಾಟಕ ನ್ಯಾಯಾಂಗ ಅಕಾಡೆಮಿ ನ್ಯಾಯಾಂಗದ ಅಧಿಕಾರಿಗಳಿಗೆ ಆರಂಭಿಸಿರುವ ಸಹಾಯವಾಣಿಗೆ ಗುರುವಾರ ಇಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, `ನ್ಯಾಯಾಧೀಶರು ಕಾನೂನಿನ ನೆಲೆಯಲ್ಲಿ ಮಾನವೀಯ ತೀರ್ಪು ನೀಡಬೇಕು~ ಎಂದು ಹೇಳಿದರು.ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಮಾತನಾಡಿ, `ಕಾನೂನು ವಿಚಾರದಲ್ಲಿ ಎದುರಾಗುವ ಗೊಂದಲಗಳನ್ನು ನಿವಾರಿಸುವಲ್ಲಿ ನ್ಯಾಯಾಧೀಶರಿಗೂ ಈ ಸಹಾಯವಾಣಿ ನೆರವು ನೀಡಲಿದೆ~ ಎಂಬ ಆಶಯ ವ್ಯಕ್ತಪಡಿಸಿದರು.`ಅಧೀನ ನ್ಯಾಯಾಲಯಗಳು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ನಮ್ಮ ನಿರೀಕ್ಷೆಗೆ ತಕ್ಕಷ್ಟು ಬೆಳವಣಿಗೆ ಸಾಧಿಸಿಲ್ಲ~ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎನ್. ಕುಮಾರ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry