ಮಾಹಿತಿ, ಮೌಲ್ಯ ಶಿಕ್ಷಣ ಅಗತ್ಯ

ಸೋಮವಾರ, ಮೇ 20, 2019
32 °C

ಮಾಹಿತಿ, ಮೌಲ್ಯ ಶಿಕ್ಷಣ ಅಗತ್ಯ

Published:
Updated:

ಬೆಂಗಳೂರು: ` ಶಿಕ್ಷಣ ಹಾಗೂ ಮೌಲ್ಯ ಶಿಕ್ಷಣ ಎರಡೂ ಪ್ರಮುಖವಾಗಿದ್ದು, ಇವುಗಳನ್ನು ಪಡೆದಾಗ ಮಾತ್ರ ವಿದ್ಯಾರ್ಥಿಯ ಪರಿಪೂರ್ಣ ವ್ಯಕ್ತಿತ್ವ ರೂಪುಗೊಳ್ಳಲಿದೆ~ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಪ್ರೊ.ಕೆ. ನರಹರಿ ಅಭಿಪ್ರಾಯಪಟ್ಟರು.ಜಯನಗರದ 4ನೇ `ಟಿ~ ಬ್ಲಾಕ್‌ನಲ್ಲಿರುವ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಅತ್ಯುತ್ತಮ ವೈದ್ಯಕೀಯ ಶಿಕ್ಷಕರನ್ನು ಅಭಿನಂದಿಸಿ ಅವರು ಮಾತನಾಡಿದರು.`ಜನರಿಗೆ ಸುಧಾರಿತ ಸೌಲಭ್ಯ ಕಲ್ಪಿಸುವಲ್ಲಿ ಮಾಹಿತಿ ಶಿಕ್ಷಣದ ಪಾತ್ರ ಮಹತ್ವದ್ದಾಗಿದೆ. ಆ ಹಿನ್ನೆಲೆಯಲ್ಲಿ ಈ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಆದರೆ ಈ ಶಿಕ್ಷಣವನ್ನಷ್ಟೇ ಪಡೆದರೆ ವಿದ್ಯಾರ್ಥಿ ಸ್ವಾರ್ಥ, ಅಮಾನವೀಯತೆಯ ಮನೋಭಾವ ಬೆಳೆಸಿಕೊಳ್ಳುವ ಸಾಧ್ಯತೆ ಹೆಚ್ಚು~ ಎಂದರು.`ವ್ಯಕ್ತಿತ್ವ ವಿಕಸನವಾಗಬೇಕಾದರೆ ಮೌಲ್ಯ ಶಿಕ್ಷಣವೂ ಅಗತ್ಯ. ಶಿಕ್ಷಕರು ಸಾಧಕರ ಆದರ್ಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಬೇಕು. ವ್ಯವಸ್ಥೆಯಲ್ಲಿನ ಲೋಪಗಳ ಬಗ್ಗೆ ದೂರುವ ಬದಲು ವ್ಯವಸ್ಥೆಯ ಸುಧಾರಣೆಗೆ ಪ್ರಯತ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು~ ಎಂದು ಕಿವಿಮಾತು ಹೇಳಿದರು.ವೈದ್ಯರಾದ ಡಾ.ಟಿ. ಪ್ರಭು, ಡಾ.ಡಿ.ಎ. ಲತಾ, ಡಾ.ಲೂಕಸ್, ಡಾ.ಬಿ.ಟಿ.ರುದ್ರೇಶ್, ಪ್ರೊ.ಜಿ.ಆರ್. ಚಾಮನಾಳಕರ್ ಅವರನ್ನು ಸನ್ಮಾನಿಸಲಾಯಿತು.ಅಭಿನಂದಿತರ ಪರವಾಗಿ ಮಾತನಾಡಿದ ಬಿ.ಟಿ. ರುದ್ರೇಶ್, `ಪ್ರಶಸ್ತಿಗಳು ಸಾಧನೆಯ ಮೈಲುಗಲ್ಲು ಎನ್ನಬಹುದು. ಜೀವನದ ಗುರಿ ಹಾಗೂ ಅದನ್ನು ತಲುಪಬೇಕಾದ ದಾರಿ ಸರಿಯಾಗಿಲ್ಲದಿದ್ದರೆ ಯಶಸ್ಸು ಸಾಧ್ಯವಿಲ್ಲ~ ಎಂದು ಹೇಳಿದರು.`ಆರೋಗ್ಯ ಸೇವೆ ಇಂದು ದಂದೆಯಾಗಿ ಪರಿಣಮಿಸಿದೆ, ವಾಣಿಜ್ಯಮಯವಾಗಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ. ಹಾಗಾಗಿ ವೈದ್ಯಕೀಯ ವಲಯವನ್ನು ಸೇವಾ ಕ್ಷೇತ್ರದಿಂದ ಹೊರಗಿಡುವ ಬಗ್ಗೆ ಗಂಭೀರ ಚಿಂತನೆ ನಡೆಯಬೇಕಿದೆ. ವಿದ್ಯಾರ್ಥಿಗಳು ಈ ಬಗ್ಗೆ ಯೋಚಿಸಬೇಕಿದೆ~ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ವಿ.ವಿಯ ವಿಶೇಷ ಪ್ರಕಟಣೆಯನ್ನು ಬಿಡುಗಡೆ ಮಾಡಲಾಯಿತು. ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಸ್. ಶ್ರೀಪ್ರಕಾಶ್, ಕುಲಸಚಿವ ಡಾ.ಡಿ. ಪ್ರೇಮ್‌ಕುಮಾರ್ ಇತರರು ಈ ಸಂದರ್ಭದಲ್ಲಿ  ಉಪಸ್ಥಿತರಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry