ಮಾಹಿತಿ ವಿಳಂಬ: ರೂ 15000 ದಂಡ

7

ಮಾಹಿತಿ ವಿಳಂಬ: ರೂ 15000 ದಂಡ

Published:
Updated:

ಗುಲ್ಬರ್ಗ: ಮಾಹಿತಿ ಹಕ್ಕುಕಾಯ್ದೆಯಡಿ ಸಲ್ಲಿಸಿದ ಎರಡು ಅರ್ಜಿಗಳಿಗೆ ಮಾಹಿತಿ ನೀಡಲು ಸುಮಾರು ಒಂದೂವರೆ ವರ್ಷ ವಿಳಂಬ ಮಾಡಿದ ಗುಲ್ಬರ್ಗ ಮಹಾನಗರ ಪಾಲಿಕೆ ಮಾಹಿತಿ ಅಧಿಕಾರಿ-ಕಾರ್ಯಪಾಲಕ ಎಂಜಿಯರ್ ಎಚ್.ಎ. ಪೀರ ಅವರಿಗೆ ರಾಜ್ಯ ಮಾಹಿತಿ ಹಕ್ಕು ಆಯೋಗ ತನ್ನ ಮಧ್ಯಂತರ ಆದೇಶದಲ್ಲಿ  ಒಟ್ಟು ರೂ.15,000 ದಂಡವಿಧಿಸಿದೆ ಎಂದು ಅರ್ಜಿದಾರ ಯುವಕರ್ನಾಟಕ ರಕ್ಷಣಾ ಸೇನೆ ಅಧ್ಯಕ್ಷ ಸಂಗಮನಾಥ ಬಿ.ಹಿರೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಎರಡೂ ಪ್ರಕರಣಗಳ ವಿಚಾರಣೆಯನ್ನು 2013 ಫೆಬ್ರುವರಿ 14ಕ್ಕೆ ಮುಂದೂಡಲಾಗಿದೆ ಎಂದಿರುವ ಸಂಗಮನಾಥ, ತನ್ನ ಅರ್ಜಿಯಲ್ಲಿ 12.10.2010ರಂದು ಮುಖ್ಯಮಂತ್ರಿ ವಿಶೇಷ ಅನುದಾನದ ರಸ್ತೆಕಾಮಗಾರಿ, 04.10.2010ರ ಗುಲ್ಬರ್ಗಸಚಿವ ಸಂಪುಟ ಸಭೆಗೆ ಮುನ್ನ ನಡೆಸಿದ ವಿವಿಧ ಕಾಮಗಾರಿಗಳ ವೆಚ್ಚ , ಭೌತಿಕ ಕೆಲಸದ ಬಗ್ಗೆ ಅರ್ಜಿಯಲ್ಲಿ ಲಿಖಿತ ಮಾಹಿತಿ ಕೋರಲಾಗಿತ್ತು ಎಂದಿದ್ದಾರೆ.ಆದರೆ ಅಧಿಕಾರಿ ನಿಗದಿತ ಅವಧಿಯಲ್ಲಿ ಮಾಹಿತಿ ನೀಡದಿರುವ ಹಿನ್ನೆಲೆಯಲ್ಲಿ ಅದೇ ವರ್ಷ ಡಿಸೆಂಬರ್ 18ರಂದು ಮೇಲ್ಮನವಿ ದಾಖಲಿಸಿದ್ದರು. ಮಾಹಿತಿ ಆಯೋಗ ಮಾಹಿತಿ ನೀಡಲು ಅಧಿಕಾರಿಗೆ ಸೂಚಿಸಿತು. ಆದರೂ ಫಲಕಾರಿಯಾಗಲಿಲ್ಲ. ಕೊನೆಗೆ ಎರಡನೇ ಮೇಲ್ಮನವಿಯನ್ನು ರಾಜ್ಯ ಮಾಹಿತಿಹಕ್ಕುಆಯೋಗಕ್ಕೆ ಸಂಗಮನಾಥ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ಪ್ರಾಧಿಕಾರ ಮಾಹಿತಿ ನೀಡುವಂತೆ ಅಧಿಕಾರಿಗೆ ನೋಟಿಸ್ ಜಾರಿಗೊಳಿಸಿತ್ತು. ಈ ಸಂದರ್ಭದಲ್ಲಿ ಎಚ್ಚೆತ್ತ ಪಾಲಿಕೆ ಅಧಿಕಾರಿ ಒಂದೂವರೆ ವರ್ಷ ವಿಳಂಬದ ಬಳಿಕ 17.4.2012ರಂದು ಮಾಹಿತಿ ಒದಗಿಸಿದ್ದರು.ಅಧಿಕಾರಿಯ ವಿಳಂಬ ನೀತಿ ಹಾಗೂ ಆಯೋಗದ ವಿಚಾರಣೆಗೆ ಗೈರುಹಾಜರನ್ನು ಗಂಭೀರವಾಗಿ ಪರಿಗಣಿಸಿದ ಮಾಹಿತಿ ಆಯೋಗವು ಎರಡು ಅರ್ಜಿಗಳಿಗೆ ಸಂಬಂಧಿಸಿ ಅಧಿಕಾರಿಗೆ ಅನುಕ್ರಮವಾಗಿ ರೂ.5000 ಹಾಗೂ ರೂ. 10,000 ದಂಡ ವಿಧಿಸಿ  ಆದೇಶಿಸಿದೆ ಎಂದು ಅರ್ಜಿದಾರರ ಪ್ರಕಣೆ ತಿಳಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry