ಮಾಹಿತಿ ಸೋರಿಕೆ: ಸಿಎಂ ಪಿಎಗಳ ಎತ್ತಂಗಡಿ

ಸೋಮವಾರ, ಜೂಲೈ 22, 2019
27 °C

ಮಾಹಿತಿ ಸೋರಿಕೆ: ಸಿಎಂ ಪಿಎಗಳ ಎತ್ತಂಗಡಿ

Published:
Updated:

ಬೆಂಗಳೂರು: ಮಾಹಿತಿ ಸೋರಿಕೆಯ ಶಂಕೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 15 ಮಂದಿ ಆಪ್ತ ಸಹಾಯಕರನ್ನು (ಪಿ.ಎ) ಅಲ್ಲಿಂದ ಬಿಡುಗಡೆ ಮಾಡಿ, ಮಾತೃ ಇಲಾಖೆಗಳಿಗೆ ವರ್ಗಾಯಿಸಲಾಗಿದೆ.ಮುಖ್ಯಮಂತ್ರಿಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಎಂ.ಸಿ.ನಾಗರಾಜ್ ಮತ್ತು ಲಕ್ಷ್ಮಯ್ಯ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಬಿ.ಜೆ.ಪುಟ್ಟಸ್ವಾಮಿ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮುತ್ತು, ಮುಖ್ಯಮಂತ್ರಿಯವರ ಪರಿಹಾರ ನಿಧಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ವೀರಪ್ಪ ಮತ್ತು ಶಿವಮಾದು, ಮುಖ್ಯಮಂತ್ರಿಯವರ ಉಪ ಕಾರ್ಯದರ್ಶಿ ಮುಹಮದ್ ಮೊಹಮದ್ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಹೇಶ್ ಅವರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry