ಮಾಹಿತಿ ಹಕ್ಕು: ಕ್ರಮ ಕೈಗೊಳ್ಳಲು ಒತ್ತಾಯ

7

ಮಾಹಿತಿ ಹಕ್ಕು: ಕ್ರಮ ಕೈಗೊಳ್ಳಲು ಒತ್ತಾಯ

Published:
Updated:

ಬೆಂಗಳೂರು: `ಮಾಹಿತಿ ಹಕ್ಕು ಕಾಯ್ದೆಗೆ ಸಂಬಂಧಿಸಿದಂತೆ  ಮುಖ್ಯ ಕಾನೂನು ಅಂಶಗಳು ಹಾಗೂ ನಿಯಮಗಳನ್ನು ರೂಪಿಸಲು ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು~ ಎಂದು ಕರ್ನಾಟಕ ಮಾಹಿತಿ ಹಕ್ಕು ಕಾಯ್ದೆ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಜೆ.ಎಸ್.ಡಿ. ಪಾಣಿ ಅವರು ಇಲ್ಲಿ ಒತ್ತಾಯಿಸಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದು 6 ವರ್ಷಗಳಾಗಿವೆ. ಅದರಲ್ಲಿನ ಕಾನೂನು ಅಂಶಗಳನ್ನು ಪೂರ್ಣವಾಗಿ ಜಾರಿಗೊಳಿಸಿಲ್ಲ. ಕಾಯ್ದೆಯ ಮುಖ್ಯ ಭಾಗವಾದ ಕಲಂ 4 (1)(ಎ) ಮತ್ತು 4 (1)(ಬಿ) ಗಳನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತಂದಿಲ್ಲ. ಪರಿಣಾಮ ಕಾರ್ಯಕರ್ತರಿಗೆ ಅಗತ್ಯ ಮಾಹಿತಿಗಳು ಸಿಗುತ್ತಿಲ್ಲ~ ಎಂದು ಆರೋಪಿಸಿದರು.ಒಕ್ಕೂಟದ ಕಾರ್ಯಕರ್ತರಾದ ವಿಕ್ರಂ ಸಿನ್ಹ, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry