ಮಾಹಿತಿ ಹಕ್ಕು: ಹೆಚ್ಚಿನ ರಕ್ಷಣೆ ನೀಡಿ

ಬುಧವಾರ, ಜೂಲೈ 24, 2019
28 °C

ಮಾಹಿತಿ ಹಕ್ಕು: ಹೆಚ್ಚಿನ ರಕ್ಷಣೆ ನೀಡಿ

Published:
Updated:

ನವದೆಹಲಿ (ಪಿಟಿಐ): ಪಾರದರ್ಶಕ ಸಮಾಜಕ್ಕಾಗಿ ಹೋರಾಡುತ್ತಿರುವ ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಹೆಚ್ಚಿನ ಸುರಕ್ಷತೆ ಒದಗಿಸುವ ನೀತಿ ರೂಪಿಸಲು ಸರ್ಕಾರಿ ನಿಯೋಜಿತ ವಿಶೇಷ ಕಾರ್ಯಪಡೆ ಸರ್ಕಾರವನ್ನು ಒತ್ತಾಯಿಸಿದೆ.ಈ ಕುರಿತು ಚರ್ಚಿಸಲು ಜೂನ್ ಕೊನೆಯಲ್ಲಿ ಗೃಹ ಇಲಾಖೆ ಪ್ರತಿನಿಧಿಯೊಬ್ಬರ ಉಪಸ್ಥಿತಿಯಲ್ಲಿ ಸಭೆ ಕರೆಯಲಾಗುವುದು ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ರಾಷ್ಟ್ರದಲ್ಲಿ, ಮಾಹಿತಿ ಹಕ್ಕು ಕಾರ್ಯಕರ್ತರ ಮೇಲೆ ಹಿಂಸಾತ್ಮಕ ಹಲ್ಲೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಆಗ್ರಹ ಕೇಳಿಬಂದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry