ಮಾ.16ಕ್ಕೆ ಕೇಂದ್ರ ಬಜೆಟ್

7

ಮಾ.16ಕ್ಕೆ ಕೇಂದ್ರ ಬಜೆಟ್

Published:
Updated:

ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರವು 2012-13ನೇ ಸಾಲಿನ ಬಜೆಟ್ ಅನ್ನು ಮಾರ್ಚ್ 16ರಂದು (ಶುಕ್ರವಾರ) ಮಂಡಿಸಲಿದೆ.ಮಾ.14ರಂದು ರೈಲ್ವೆ ಬಜೆಟ್ ಹಾಗೂ 15ರಂದು ಆರ್ಥಿಕ ಸಮೀಕ್ಷೆ ವರದಿ ಮಂಡನೆಯಾಗಲಿವೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪವನ್ ಕುಮಾರ್ ಬನ್ಸಾಲ್ ತಿಳಿಸಿದ್ದಾರೆ. ಬಜೆಟ್ ಅಧಿವೇಶನ ಮಾರ್ಚ್ 12ರಿಂದ ಪ್ರಾರಂಭವಾಗಲಿದ್ದು, ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸಂಸತ್ತಿನ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಧಿವೇಶನ ಮಾರ್ಚ್ 30ರವರೆಗೆ ಮುಂದುವರೆಯಲಿದೆ.

ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅಧ್ಯಕ್ಷತೆಯಲ್ಲಿನ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಪಿಎ)   ಮಂಗಳವಾರ ಇಲ್ಲಿ ಸಭೆ ಸೇರಿ ಬಜೆಟ್ ಅಧಿವೇಶನದ ಕಲಾಪಗಳನ್ನು ಅಂತಿಮಗೊಳಿಸಿತು. ಬಜೆಟ್ ಅಧಿವೇಶನದ ಎರಡನೆಯ ಸುತ್ತು ಏಪ್ರಿಲ್ 24ರಿಂದ ಮೇ 22ರ ವರೆಗೆ ನಡೆಯಲಿದೆ. ಸಾಮಾನ್ಯವಾಗಿ ಬಜೆಟ್ ಅಧಿವೇಶನ ಫೆಬ್ರುವರಿ ತಿಂಗಳ ಮೂರ ನೇಯ ವಾರದಿಂದ ಪ್ರಾರಂಭವಾ ಗುತ್ತದೆ. ಆದರೆ, ಈ ಬಾರಿ 5 ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇದನ್ನು ಮುಂದೂಡ ಲಾಗಿದೆ.ಪ್ರಣವ್‌ಗೆ 5ನೇ ಬಜೆಟ್: ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಈ ಬಾರಿ ತಮ್ಮ 5ನೇ ಬಜೆಟ್ ಮಂಡಿಸಲಿದ್ದಾರೆ. 2009ರಲ್ಲಿ ಒಂದು ಮಧ್ಯಂತರ ಬಜೆಟ್ ಸೇರಿದಂತೆ ಇದುವರೆಗೆ ಅವರು 4 ಬಜೆಟ್‌ಗಳನ್ನು ಮಂಡಿ ಸಿದ್ದಾರೆ. ಆರ್ಥಿಕ ವೃದ್ಧಿ ದರ (ಜಿಡಿಪಿ) ಕುಸಿಯುತ್ತಿರುವುದು, ಸಬ್ಸಿಡಿ ಮೊತ್ತ ಹೆಚ್ಚಿರುವುದು, ಷೇರುಪೇಟೆಯಲ್ಲಿನ ತೀವ್ರ ಏರಿಳಿತ ಸೇರಿದಂತೆ ಹಲವಾರು ಸಂಗತಿಗಳಿಗೆ ಅವರು ಬಜೆಟ್ ಮೂಲಕ ಉತ್ತರ ನೀಡಬೇಕಾಗಿದೆ.  ದೇಶದ ವಿತ್ತೀಯ ಕೊರತೆ ಅಂತರ ತಗ್ಗಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕಾದ ಸವಾಲು ಕೂಡ ಅವರ ಮುಂದಿದೆ.

ವೃದ್ಧಿ ದರ ಕುಸಿತ (ಮುಂಬೈ ವರದಿ): ತಯಾರಿಕೆ, ಕೃಷಿ ಮತ್ತು ಗಣಿಗಾರಿಕೆ ಕ್ಷೇತ್ರಗಳ ಉತ್ಪಾದನೆಯು  ತೀವ್ರ ಪ್ರಮಾಣದಲ್ಲಿ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ, ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ಆರ್ಥಿಕ ವೃದ್ಧಿ ದರವು (ಜಿಡಿಪಿ) ಕಳೆದ ಮೂರು ವರ್ಷಗಳಲ್ಲೇ ಕನಿಷ್ಠ ಮಟ್ಟ ಶೇ 6.9ಕ್ಕೆ ಇಳಿಕೆ ಕಾಣಲಿದೆ ಎಂದು ಕೇಂದ್ರ ಅಂಕಿ ಸಂಖ್ಯೆ ಸಂಘಟನೆ (ಸಿಎಸ್‌ಒ) ಅಂದಾಜಿಸಿದೆ.  2010-11ರಲ್ಲಿ ಶೇ 7ರಷ್ಟಿದ್ದ ಕೃಷಿ ಕ್ಷೇತ್ರವು ಪ್ರಸಕ್ತ ಅವಧಿಯಲ್ಲಿ ಶೇ 2.5ಕ್ಕೆ ಇಳಿಕೆ ಕಾಣಲಿದೆ, ತಯಾರಿಕೆ ಕ್ಷೇತ್ರವೂ ಶೇ 3.9ಕ್ಕೆ ಕುಸಿಯಲಿದೆ ಎಂದು `ಸಿಎಸ್‌ಒ~ ಹೇಳಿದೆ. `ಜಿಡಿಪಿ~ ಶೇ 6.9ಕ್ಕೆ ಕುಸಿಯಲಿರುವ ಅಂದಾಜಿಗೆ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ನಿರಾಶೆ ವ್ಯಕ್ತಪಡಿಸಿದ್ದಾರೆ. ಕೈಗಾರಿಕೆ ಉತ್ಪಾದನೆ ಮತ್ತು ಹೂಡಿಕೆ ಪ್ರಮಾಣ ಇಳಿಕೆಯಾಗಿರುವುದು ವೃದ್ಧಿ ದರ ಕುಸಿಯಲು ಮುಖ್ಯ ಕಾರಣ ಎಂದಿದ್ದಾರೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry