ಮಾ.4ರಂದು ಮಾದರ ಚನ್ನಯ್ಯ ಜಯಂತ್ಯುತ್ಸವ

7

ಮಾ.4ರಂದು ಮಾದರ ಚನ್ನಯ್ಯ ಜಯಂತ್ಯುತ್ಸವ

Published:
Updated:

ಗುಲ್ಬರ್ಗ: ನಿಜ ಶರಣ ಕಾಯಕ ಪ್ರಿಯ ಮಾದರ ಚನ್ನಯ್ಯನವರ ತ್ಯುತ್ಸಜಯಂವ ಆಚರಣೆಯು ಮಾರ್ಚ್ 4ರಂದು ನಗರದ ಇಂದಿರಾ ಸ್ಮಾರಕ ಭವನ ಪಕ್ಕದ ಸಾರ್ವಜನಿಕ ಉದ್ಯಾನದಲ್ಲಿ ನಡೆಯಲಿದೆ.ಮಾ.4ರಂದು ಬೆಳಿಗ್ಗೆ 10.30ಕ್ಕೆ ವಲ್ಲಭಭಾಯಿ ಪಟೇಲ್ ವೃತ್ತದಿಂದ ಸಾರ್ವಜನಿಕ ಉದ್ಯಾನ ತನಕ ಮೆರವಣಿಗೆ ಸಾಗಲಿದೆ. ಬಳಿಕ ಮಧ್ಯಾಹ್ನ 12.30ಕ್ಕೆ ಉದ್ಯಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಚಿತ್ರದುರ್ಗ ಮಾದರಚನ್ನಯ್ಯ ಗುರುಪೀಠದ ಬಸವಮೂರ್ತಿ ಸ್ವಾಮೀಜಿ, ಹೊಸಪೇಟೆಯ ಪೂರ್ಣಾನಂದ ಭಾರತಿ ಸ್ವಾಮೀಜಿ ಮತ್ತು ಸುಲಫಲ ಮಠದ ಮಹಾಂತ ಶಿವಾಚಾರ್ಯ ಸಾನಿಧ್ಯ ವಹಿಸುವರು.

 

ಸಣ್ಣ ನೀರಾವರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಗೋವಿಂದ ಕಾರಜೋಳ ಸಭೆಯನ್ನು ಉದ್ಘಾಟಿಸುವರು. ಸಮಾಜ ಕಲ್ಯಾಣ ಇಲಾಖೆ ಮತ್ತು ಬಂಧೀಖಾನೆ ಸಚಿವ ಎ.ನಾರಾಯಣ ಸ್ವಾಮಿ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡುವರು. ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಉಪಸ್ಥಿತರಿರುವರು.ರಾಜ್ಯ ಸಭಾ ಸದಸ್ಯ ಕೆ.ಬಿ.ಶಾಣಪ್ಪ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕೇಂದ್ರದ ಸಚಿವ ಕೆ.ಎಚ್. ಮುನಿಯಪ್ಪ, ಸಚಿವ ಬಸವರಾಜ ಬೊಮ್ಮಾಯಿ, ರೇವುನಾಯಕ ಬೆಳಮಗಿ, ಶಾಸಕ ಶ್ರೀರಾಮಲು ಮತ್ತಿತರರು ಆಗಮಿಸುವರು. 

 

`ಮಾದರ ಚನ್ನಯ ಅಭಿವೃದ್ಧಿ ನಿಗಮ ಸ್ಥಾಪನೆ, ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಮಾದರ ಚನ್ನಯ್ಯ ಅಧ್ಯಯನ ಪೀಠ ಆರಂಭ ಹಾಗೂ ಗುಲ್ಬರ್ಗದಲ್ಲಿ ಮಾದರ ಚನ್ನಯ್ಯ ಭವನ ನಿರ್ಮಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗುವುದು~ ಎಂದು ಜಯಂತ್ಯುತ್ಸವ ಸಮನ್ವಯ ಸಮಿತಿ ಅಧ್ಯಕ್ಷ ವಿಜಯಕುಮಾರ ದ. ಅವರಾದಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಹೇಳಿದರು. ಮನೋಹರ ಟಿ. ಕಾಂಬಳೆ, ಸಾಯಿಬಣ್ಣ ಚಂದನ, ರುಕ್ಕಪ್ಪಾ ಟಿ. ಕಾಂಬಳೆ, ಪರಮೇಶ್ವರ ಖಾನಾಪುರ, ಶಾಮ ನಾಟೀಕರ ಮತ್ತಿತರರು ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry