ಶನಿವಾರ, ಮೇ 15, 2021
22 °C

ಮಿಂಚಿದ ಇರ್ಫಾನ್ ಪಠಾಣ್, ಆ್ಯರನ್ ಫಿಂಚ್ :ಡೆವಿಲ್ಸ್‌ಗೆ ಬೆದರಿದ ರೈಡರ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಮಳೆ ಕಾರಣ ತಡವಾಗಿ ಆರಂಭವಾದ ಕೋಲ್ಕತ್ತ ನೈಟ್ ರೈಡರ್ಸ್ ಎದುರಿನ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಎಂಟು ವಿಕೆಟ್‌ಗಳ ಗೆಲುವು ಸಾಧಿಸಿದೆ.ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಈ ಪಂದ್ಯದಲ್ಲಿ ಆತಿಥೇಯ ನೈಟ್ ರೈಡರ್ಸ್ ನೀಡಿದ 98 ರನ್‌ಗಳ ಗುರಿಯನ್ನು ಡೇರ್‌ಡೆವಿಲ್ಸ್ 11.1 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ತಲುಪಿತು. ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ತಲಾ 12 ಓವರ್ ನಿಗದಿಪಡಿಸಲಾಗಿತ್ತು.ಈ ಗೆಲುವಿನಲ್ಲಿ ಆಲ್‌ರೌಂಡರ್ ಇರ್ಫಾನ್ ಪಠಾಣ್ (ಔಟಾಗದೆ 42) ಹಾಗೂ ಆ್ಯರನ್ ಫಿಂಚ್ ಪ್ರಮುಖ ಪಾತ್ರ ವಹಿಸಿದರು. ಕೇವಲ 20 ಎಸೆತಗಳನ್ನು ಎದುರಿಸಿದ ಇರ್ಫಾನ್ 2 ಬೌಂಡರಿ ಹಾಗೂ 3 ಸಿಕ್ಸರ್ ಎತ್ತಿದರು. ಫಿಂಚ್ 27 ಎಸೆತಗಳಿಂದ 5 ಬೌಂಡರಿ ಸಮೇತ 30 ರನ್ ಗಳಿಸಿದರು.ಮೊದಲು ಬ್ಯಾಟ್ ಮಾಡಿದ್ದ ನೈಟ್ ರೈಡರ್ಸ್ 12 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿತ್ತು. ಈ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ದೆಹಲಿ ತಂಡದ ವಾನ್ ಡರ್ ಮೆರ್ವ್ (28ಕ್ಕೆ2), ಮಾರ್ನ್ ಮಾರ್ಕೆಲ್ (18ಕ್ಕೆ3) ಹಾಗೂ ಉಮೇಶ್ ಯಾದವ್ (9ಕ್ಕೆ2) ಪರಿಣಾಮಕಾರಿ ಬೌಲಿಂಗ್ ಪ್ರದರ್ಶನ ನೀಡಿದರು.ರಾತ್ರಿ 8.30ರ ವೇಳೆಗೆ ವರುಣ ತನ್ನ ಆರ್ಭಟವನ್ನು ನಿಲ್ಲಿಸಿದ. ಆದರೆ ಪಿಚ್‌ನ ಸುತ್ತಲೂ ನೀರು ಇದ್ದ ಕಾರಣ ಪಂದ್ಯ ತಡವಾಗಿ ಆರಂಭವಾಯಿತು. ನೈಟ್ ರೈಡರ್ಸ್ ತಂಡದ ಮಾಲೀಕ ಹಾಗೂ ಬಾಲಿವುಡ್ ನಟ ಶಾರೂಖ್ ಖಾನ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಇತರ ಗಣ್ಯರು ಪಂದ್ಯ ವೀಕ್ಷಿಸಲು ಆಗಮಿಸಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.