ಮಿಂಚಿದ ಕೋಝಿ: ದ.ಆಫ್ರಿಕಾಕ್ಕೆ ಜಯ

7

ಮಿಂಚಿದ ಕೋಝಿ: ದ.ಆಫ್ರಿಕಾಕ್ಕೆ ಜಯ

Published:
Updated:

ನವದೆಹಲಿ: ಪೈಟಿ ಕೋಝಿ ಕೈಚಳಕದ ನೆರವಿನಿಂದ ದಕ್ಷಿಣ ಆಫ್ರಿಕಾದ ತಂಡವು ಶನಿವಾರ ಆರಂಭವಾದ ಒಲಿಂಪಿಕ್ಸ್ ಹಾಕಿ ಅರ್ಹತಾ ಟೂರ್ನಿಯ ಮಹಿಳೆಯರ ವಿಭಾಗದ ಪಂದ್ಯದಲ್ಲಿ ಶುಭಾರಂಭ ಮಾಡಿತು.ಮೇಜರ್ ಧ್ಯಾನಚಂದ್ ಹಾಕಿ ಕ್ರೀಡಾಂಗಣದಲ್ಲಿ ಬೆಳಿಗ್ಗೆ ನಡೆದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 2-1ರಿಂದ ಪೋಲೆಂಡ್ ತಂಡದ ವಿರುದ್ಧ ಜಯ ಗಳಿಸಿತು. ಪಂದ್ಯದ 39ನೇ ನಿಮಿಷದಲ್ಲಿ ದಕ್ಷಿಣ ಆಫ್ರಿಕಾ ತಂಡದ ವುಡ್ಸ್ ಕೆಟ್ ಪೆನಾಲ್ಟಿ ಕಾರ್ನರ್ ಅನ್ನು ಗೋಲಿನಲ್ಲಿ ಪರಿವರ್ತಿಸಿದರು. 53ನೇ ನಿಮಿಷದಲ್ಲಿ ಪೈಟಿ ಕೋಝಿ ಗೆಲುವಿನ ಗೋಲು ತಂದಿತ್ತರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry