ಮಿಂಚಿದ ಪ್ರಿಯಾಂಕಾ: ದಾಖಲೆ

7

ಮಿಂಚಿದ ಪ್ರಿಯಾಂಕಾ: ದಾಖಲೆ

Published:
Updated:

ಧಾರವಾಡ: ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ರಾಣಿ ಚನ್ನಮ್ಮ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಅಂತರ ಕಾಲೇಜು ಕ್ರೀಡಾಕೂಟದಲ್ಲಿ ಇಲ್ಲಿಯ ಕರ್ನಾಟಕ ಕಲಾ ಕಾಲೇಜಿನ ಕ್ರೀಡಾಪಟು ಪ್ರಿಯಾಂಕಾ ಕಾಳಗಿ 25:46 ಸೆಕೆಂಡ್‌ಗಳಲ್ಲಿ 200 ಮೀಟರ್ ದೂರ ಕ್ರಮಿಸುವ ಮೂಲಕ 2011ರಲ್ಲಿ ತಾವೇ ನಿರ್ಮಿಸಿದ್ದ ದಾಖಲೆಯನ್ನು (25:48) ಮುರಿದರು.ಪುರುಷರ 200 ಮೀಟರ್ ಓಟದಲ್ಲಿ ಹುಬ್ಬಳ್ಳಿಯ ಶ್ರೀ ಕಾಡಸಿದ್ಧೇಶ್ವರ ಹಾಗೂ ಎಚ್.ಎಸ್.ಕೋತಂಬ್ರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಬನಾಜಿ ರಾಜು (23:13 ಸೆ) ಮೊದಲಿಗರಾಗಿ ಗುರಿ ತಲುಪಿದರು.5000 ಮೀ. ಪುರುಷರ ಓಟದಲ್ಲಿ ಧಾರವಾಡದ ಜೆಎಸ್‌ಎಸ್ ಸಂಸ್ಥೆಯ ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ್ ಗುಬ್ಬಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಕೃಷ್ಣಪ್ಪ ಸಂತಿ ಪ್ರಥಮ ಬಹುಮಾನ ಪಡೆದರು. 800 ಮೀಟರ್ ಓಟದಲ್ಲಿ ಅದೇ ಕಾಲೇಜಿನ ಚನ್ನಬಸಪ್ಪ ಜಾಲಿಹಾಳ, ಡಿಸ್ಕಸ್ ಥ್ರೋನಲ್ಲಿ ಕೆಸಿಡಿ ಕಾಲೇಜಿನ ಎಂ.ವಿ.ಯಲ್ಲಪ್ಪ, ಲಾಂಗ್ ಜಂಪ್‌ನಲ್ಲಿ ಶಿಗ್ಗಾವಿಯ ಎಸ್‌ಆರ್‌ಜೆವಿ ಕಲಾ ಹಾಗೂ ವಾಣಿಜ್ಯ ಕಾಲೇಜಿನ ಸಂಪತ್ ಎಂ.ಬಂಗಾಡಿ, ಶಾಟ್‌ಪುಟ್‌ನಲ್ಲಿ ಶಿರಸಿಯ ಎಂ.ಎಂ.ಕಲಾ ಹಾಗೂ ವಿಜ್ಞಾನ ಕಾಲೇಜಿನ ವಿನಯ್ ಡಿ.ಎನ್. ಪ್ರಥಮ ಬಹುಮಾನ ಪಡೆದರು.ಮಹಿಳೆಯರ ವಿಭಾಗದ 100 ಮೀಟರ್ ಹರ್ಡಲ್ಸ್‌ನಲ್ಲಿ ಜೆಎಸ್‌ಎಸ್ ಸಂಸ್ಥೆಯ ಶ್ರುತಿ ಶಿರಗುಪ್ಪಿ, 5000 ಮೀಟರ್ ಓಟದಲ್ಲಿ ಹಳಿಯಾಳ ಪ್ರಥಮ ದರ್ಜೆ ಕಾಲೇಜಿನ ಗಂಗೂಬಾಯಿ ಮೇಗನಿ, 800 ಮೀ. ಓಟದಲ್ಲಿ ಧಾರವಾ ಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಶ್ರುತಿ ದೇವಶೆಟ್ಟಿ, ಡಿಸ್ಕಸ್ ಥ್ರೋನಲ್ಲಿ ಗದಗಿನ ಜೆಟಿವಿಪಿ ಸಂಸ್ಥೆಯ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಕಾಲೇಜಿನ ಸಾವಿತ್ರಿಬಾಯಿ ಎಲಿಗಾರ, ಹೈ ಜಂಪ್‌ನಲ್ಲಿ ಹೊನ್ನಾವರದ ಎಸ್‌ಡಿಎಂ ಪದವಿ ಕಾಲೇಜಿನ ಶಾಂತಿ ಗೌಡ, ಲಾಂಗ್ ಜಂಪ್‌ನಲ್ಲಿ ಜೆಎಸ್‌ಎಸ್ ಸಂಸ್ಥೆಯ ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ್ ಗುಬ್ಬಿ ವಿಜ್ಞಾನ ಕಾಲೇಜಿನ ಸುರೇಖಾ ಪಾಟೀಲ ಮೊದಲ ಸ್ಥಾನ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry