ಮಿಂಚಿದ ಬೆಂಗಳೂರಿನ ಕುಶ್

7
ವಿಶ್ವ ಸರಣಿ ಕಾರ್ಟಿಂಗ್‌ನಲ್ಲಿ ಮೊದಲ ಸ್ಥಾನ

ಮಿಂಚಿದ ಬೆಂಗಳೂರಿನ ಕುಶ್

Published:
Updated:
ಮಿಂಚಿದ ಬೆಂಗಳೂರಿನ ಕುಶ್

ಬೆಂಗಳೂರು: ಉದಯೋನ್ಮುಖ ಚಾಲಕ ಬೆಂಗಳೂರಿನ ಕುಶ್ ಮೈನಿ ಇಟಲಿಯ ಲಾ ಕೊಂಕಾ ಅಂತರರಾಷ್ಟೀಯ ಸರ್ಕಿಟ್‌ನಲ್ಲಿ ನಡೆದ ವಿಶ್ವ ಸರಣಿ ಕಾರ್ಟಿಂಗ್ ರೇಸ್‌ನಲ್ಲಿ ಚಾಂಪಿಯನ್ ಆಗಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ರೇಸರ್ ಇವರು.ಪೋಲ್ ಪೊಜಿಷನ್‌ನಿಂದ ರೇಸ್ ಶುರು ಮಾಡಿದ್ದ 12ರ ಹರೆಯದ ಕುಶ್ ಈ ಸಾಧನೆ ಮಾಡಿದ್ದಾರೆ. ಬೇಬಿ ರೇಸ್ ತಂಡದಿಂದ ಸ್ಪರ್ಧಿಸುವ ಅವರು ಅರ್ಹತಾ ಸುತ್ತಿನಲ್ಲಿ ಮೂರನೇ ಸ್ಥಾನ ಪಡೆದಿದ್ದರು. ಅವರು ಪಾಲ್ಗೊಂಡಿದ್ದ ವಿಭಾಗದಲ್ಲಿ ಒಟ್ಟು 41 ಸ್ಪರ್ಧಿಗಳಿದ್ದರು.ಫೈನಲ್ ರೇಸ್‌ನಲ್ಲಿ ಕುಶ್ ಮೊದಲ ಕಾರ್ನರ್‌ನಲ್ಲಿಯೇ ಎರಡನೇ ಸ್ಥಾನದಲ್ಲಿ ಮುನ್ನಡೆದರು. ಆಗ ಮಾರ್ಟಿನೆಜ್ ಮೊದಲ ಸ್ಥಾನದಲ್ಲಿದ್ದರು. ಆದರೆ ಕೊನೆಯ ಕಾರ್ನರ್ ತಲುಪುವಷ್ಟರಲ್ಲಿ ಮಾರ್ಟಿನೆಜ್ ಅವರನ್ನು ಹಿಂದಿಕ್ಕಿದ ಕುಶ್ ಮೊದಲ ಸ್ಥಾನ ಗಳಿಸಿದರು.`ನಾನು 5ನೇ ವಯಸ್ಸಿನಲ್ಲೇ ಕಾರ್ಟಿಂಗ್ ಅಭ್ಯಾಸ ಶುರು ಮಾಡಿದ್ದೆ. ಏಳನೇ ವಯಸ್ಸಿನಲ್ಲಿ ಸ್ಪರ್ಧೆಗಿಳಿದಿದ್ದೆ. ಹೋದ ವರ್ಷ ಇಟಲಿಯಲ್ಲಿ ನಡೆದ ಹಲವು ರೇಸ್‌ಗಳಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ತೋರಿದ್ದೆ. ಆದರೆ ವಿಶ್ವ ಸರಣಿ ಕಾರ್ಟಿಂಗ್ ದೊಡ್ಡ ರೇಸ್. ಇಲ್ಲಿ ಪ್ರಶಸ್ತಿ ಜಯಿಸಿರುವುದು ತುಂಬಾ ಖುಷಿಗೆ ಕಾರಣವಾಗಿದೆ' ಎಂದಿದ್ದಾರೆ.ಆದರೆ ಕುಶ್ ಅವರ ಹಿರಿಯ  ಸಹೋದರ ಅರ್ಜುನ್ ಮೈನಿರಿಂದ ಉತ್ತಮ ಪ್ರದರ್ಶನ ಮೂಡಿಬರಲಿಲ್ಲ. ಕಾರ್ಟಿಂಗ್ ಸಮಸ್ಯೆ ಕಾರಣ ಅವರು ಹಿಂದುಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry