ಮಿಂಚಿದ ಮೆಕೆಂಜಿ; ಲಯನ್ಸ್‌ಗೆ ಜಯ

7

ಮಿಂಚಿದ ಮೆಕೆಂಜಿ; ಲಯನ್ಸ್‌ಗೆ ಜಯ

Published:
Updated:

ಜೋಹಾನ್ಸ್‌ಬರ್ಗ್: ನೀಲ್ ಮೆಕೆಂಜಿ ಹಾಗೂ ಕಿಂಟಾನ್ ಡಿ ಕಾಕ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಲಯನ್ಸ್ ತಂಡದವರು ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಎಂಟು ವಿಕೆಟ್‌ಗಳ ಗೆಲುವು ಸಾಧಿಸಿದ್ದಾರೆ.ನ್ಯೂ ವಾಂಡರರ್ಸ್‌ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ `ಬಿ~ ಗುಂಪಿನ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನೀಡಿದ 158 ರನ್‌ಗಳ ಗುರಿಯನ್ನು ಲಯನ್ಸ್ 18.5 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ತಲುಪಿತು.37 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಗಿದ್ದ ಲಯನ್ಸ್ ತಂಡಕ್ಕೆ ಮೆಕಿಂಜಿ (68; 41 ಎ.) ಹಾಗೂ ಕಿಂಟಾನ್ (51; 33 ಎ.) ಆಟ ಆಸರೆಯಾಯಿತು. ಇವರಿಬ್ಬರು ಮೂರನೇ ವಿಕೆಟ್‌ಗೆ 121 ರನ್ ಸೇರಿಸಿದರು. ಮುಂಬೈ ಇಂಡಿಯನ್ಸ್ ತಂಡದ ಏಳು ಮಂದಿ ಬೌಲ್ ಮಾಡಿದರು.ಮೊದಲು ಬ್ಯಾಟ್ ಮಾಡಿದ್ದ ಮುಂಬೈ ಇಂಡಿಯನ್ಸ್ ತಂಡ ಉತ್ತನ ಆರಂಭ ಪಡೆದಿತ್ತು. ಸಚಿನ್ (16; 24 ಎಸೆತ) ಹಾಗೂ ಡ್ವೇನ್ ಸ್ಮಿತ್ (26; 19 ಎ.) ಮೊದಲ ವಿಕೆಟ್‌ಗೆ 45 ರನ್ ಸೇರಿಸಿದರು.ಸಂಕ್ಷಿಪ್ತ ಸ್ಕೋರ್: ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 157 (ಡ್ವೇನ್ ಸ್ಮಿತ್ 26, ಸಚಿನ್ ತೆಂಡೂಲ್ಕರ್ 16, ರೋಹಿತ್ ಶರ್ಮ 27, ಮಿಷೆಲ್ ಜಾನ್ಸನ್ 30, ಕೀರನ್ ಪೊಲಾರ್ಡ್ 11, ದಿನೇಶ್ ಕಾರ್ತಿಕ್ ಔಟಾಗದೆ 19; ಸೊಹೇಲ್ ತನ್ವಿರ್ 31ಕ್ಕೆ2);ಲಯನ್ಸ್: 18.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 158 (ಗುಲಾಮ್ ಬೋದಿ 19, ನೀಲ್ ಮೆಕೆಂಜಿ ಔಟಾಗದೆ 51, ಕಿಂಟಾನ್ ಡಿ ಕಾಕ್ ಔಟಾಗದೆ 68; ಲಸಿತ್ ಮಾಲಿಂಗ 18ಕ್ಕೆ1, ಹರಭಜನ್ ಸಿಂಗ್ 36ಕ್ಕೆ1).

ಫಲಿತಾಂಶ: ಲಯನ್ಸ್‌ಗೆ 8 ವಿಕೆಟ್‌ಗಳ ಜಯ. ಪಂದ್ಯ ಶ್ರೇಷ್ಠ: ನೀಲ್ ಮೆಕೆಂಜಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry