ಭಾನುವಾರ, ಏಪ್ರಿಲ್ 18, 2021
33 °C

ಮಿಂಚಿದ ರವೀಂದ್ರ ಜಡೇಜಾ, ಪಾರ್ನೆಲ್ ಪ್ರಭಾವಿ ದಾಳಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ವೇಯ್ನ ಪಾರ್ನೆಲ್ (35ಕ್ಕೆ3) ಅವರ ಪ್ರಭಾವಿ ಬೌಲಿಂಗ್ ದಾಳಿ ನೆರವಿನಿಂದ ಪುಣೆ ವಾರಿಯರ್ಸ್ ತಂಡದವರು ಇಲ್ಲಿ ನಡೆದ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳ ತಂಡವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದ್ದಾರೆ.ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೇರಳ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತು.

 

ಈ ಗುರಿ ಬೆನ್ನಟ್ಟಿರುವ ಪುಣೆ ತಂಡ ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆ 2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 20 ರನ್ ಗಳಿಸಿತ್ತು. ಇದಕ್ಕೂ ಮೊದಲು ವೇಗಿ ಪಾರ್ನೆಲ್ ದಾಳಿಗೆ ಸಿಲುಕಿದ ಟಸ್ಕರ್ಸ್ ಕೇವಲ 24 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಲ್ಫೊನ್ಸೊ ಥಾಮಸ್ ಆರಂಭಿಕ ಬ್ಯಾಟ್ಸ್‌ಮನ್ ಬ್ರೆಂಡನ್ ಮೆಕ್ಲಮ್ ಅವರನ್ನು ಮೊದಲ ಎಸೆತದಲ್ಲಿ ಔಟ್ ಮಾಡಿದರು. ಬಳಿಕ ಪಾರ್ನೆಲ್ ಕ್ರಮವಾಗಿ ಲಕ್ಷ್ಮಣ್, ಪಾರ್ಥಿವ್ ಪಟೇಲ್ ಹಾಗೂ ನಾಯಕ ಜಯವರ್ಧನೆ ವಿಕೆಟ್ ಪಡೆದರು.

 

ಆದರೆ ಬ್ರಾಡ್ ಹಾಡ್ಜ್ (39) ಹಾಗೂ ರವೀಂದ್ರ ಜಡೇಜಾ (47; 33 ಎಸೆತ, 3 ಬೌಂ, 3 ಸಿ.) ತಂಡವನ್ನು ಅಪಾಯದಿಂದ ಪಾರು ಮಾಡಿದರು. ಇವರಿಬ್ಬರು ಐದನೇ ವಿಕೆಟ್‌ಗೆ 88 ರನ್ ಸೇರಿಸಿದರು. ಬಳಿಕ ರೈಫಿ ಗೋಮೆಜ್ 18 ಎಸೆತಗಳಲ್ಲಿ ಅಜೇಯ 26 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದರು. ಪರಿಣಾಮ ತಂಡ 148 ರನ್ ಗಳಿಸಲು ಸಾಧ್ಯವಾಯಿತು

ಸ್ಕೋರು ವಿವರ

ಕೊಚ್ಚಿ ಟಸ್ಕರ್ಸ್ ಕೇರಳ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 148

 

ಬ್ರೆಂಡನ್ ಮೆಕ್ಲಮ್ ಸಿ ರಾಬಿನ್ ಉತ್ತಪ್ಪ ಬಿ ಅಲ್ಫೊನ್ಸೊ ಥಾಮಸ್  00

 

ವಿ.ವಿ.ಎಸ್.ಲಕ್ಷ್ಮಣ್ ಬಿ ವೇಯ್ನೊ ಪಾರ್ನೆಲ್  00

 

ಪಾರ್ಥಿವ್ ಪಟೇಲ್ ಸಿ ಗ್ರೇಮ್ ಸ್ಮಿತ್ ಬಿ ವೇಯ್ನಿ ಪಾರ್ನೆಲ್  21

 

ಮಾಹೇಲ ಜಯವರ್ಧನೆ ಸಿ ರಾಬಿನ್ ಉತ್ತಪ್ಪ ಬಿ ವೇಯ್ನಿ ಪಾರ್ನೆಲ್  02

 

ಬ್ರಾಡ್ ಹಾಡ್ಜ್ ಸಿ ಮುರಳಿ ಕಾರ್ತಿಕ್ ಬಿ ರಾಹುಲ್ ಶರ್ಮ  39

 

ರವೀಂದ್ರ ಜಡೇಜಾ ಸಿ ವೇಯ್ನ್ ಪಾರ್ನೆಲ್ ಬಿ ಜೆಸ್ಸಿ ರೈಡರ್  47

 

ರೈಫಿ  ಗೋಮೆಜ್ ಔಟಾಗದೆ  26

 

ಆರ್.ವಿನಯ್ ಕುಮಾರ್ ರನ್‌ಔಟ್ (ಪಾರ್ನೆಲ್/ಉತ್ತಪ್ಪ)  01

 

ಎಸ್.ಶ್ರೀಶಾಂತ್ ರನ್‌ಔಟ್ (ಉತ್ತಪ್ಪ)  01

 

ಆರ್.ಪಿ.ಸಿಂಗ್ ಔಟಾಗದೆ  00

 

ಇತರೆ: (ಬೈ-1, ಲೆಗ್‌ಬೈ-3, ವೈಡ್-6, ನೋಬಾಲ್-1)  11

 

ವಿಕೆಟ್ ಪತನ: 1-0 (ಮೆಕ್ಲಮ್; 0.1); 2-11 (ಲಕ್ಷ್ಮಣ್; 2.2); 3-13 (ಜಯವರ್ಧನೆ; 2.5); 4-24 (ಪಾರ್ಥಿವ್; 4.5); 5-112(ಹಾಡ್ಜ್; 15.2); 6-113 (ಜಡೇಜಾ; 16.1); 7-117 (ವಿನಯ್; 16.6); 8-147 (ಶ್ರೀಶಾಂತ್; 19.5).

 

ಬೌಲಿಂಗ್: ಅಲ್ಫೊನ್ಸೊ ಥಾಮಸ್ 3-0-31-1, ಶ್ರೀಕಾಂತ್ ವಾಘ್ 2-0-10-0, ವೇಯ್ನೊ ಪಾರ್ನೆಲ್ 4-0-35-3 (ವೈಡ್-1), ಮುರಳಿ ಕಾರ್ತಿಕ್ 4-0-30-0 (ನೋಬಾಲ್-1, ವೈಡ್-1), ರಾಹುಲ್ ಶರ್ಮ 4-0-18-1, ಯುವರಾಜ್ ಸಿಂಗ್ 1-0-12-0, ಜೆಸ್ಸಿ ರೈಡರ್ 2-0-8-1.                                          

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.