ಶುಕ್ರವಾರ, ನವೆಂಬರ್ 22, 2019
23 °C
ಮೆಸಾ ಕ್ಲಾಸಿಕ್ ಅಥ್ಲೆಟಿಕ್ಸ್

ಮಿಂಚಿದ ವಿಕಾಸ್ ಗೌಡ

Published:
Updated:

ಬೆಂಗಳೂರು: ಅಮೆರಿಕಾದಲ್ಲಿ ನೆಲೆಸಿರುವ ಮೈಸೂರಿನ ವಿಕಾಸ್ ಗೌಡ ಅವರು ಆ ದೇಶದ ಈ ಋತುವಿನ ಮೊದಲ ಪ್ರಮುಖ ಅಥ್ಲೆಟಿಕ್ ಕೂಟದಲ್ಲಿ ಉತ್ತಮ ಸಾಮರ್ಥ್ಯ ತೋರುವ ಮೂಲಕ ಹೊಸ ಹೆಜ್ಜೆ ಇರಿಸಿದ್ದಾರೆ.ಎರಡು ದಿನಗಳ ಹಿಂದೆ ಅರಿಜೋನಾ ಪ್ರಾಂತ್ಯದ ಮೆಸಾ ನಗರದಲ್ಲಿ ನಡೆದ `ಮೆಸಾ ಕ್ಲಾಸಿಕ್ ಅಥ್ಲೆಟಿಕ್ಸ್'ನ ಡಿಸ್ಕಸ್ ಎಸೆತದ ಸ್ಪರ್ಧೆಯಲ್ಲಿ ಅವರು 65.82 ಮೀಟರ್ಸ್ ಸಾಧನೆ ತೋರಿದ್ದಾರೆ. ಜೆ.ಶುರ್ಮನ್ಸ್ (60.08ಮೀ.) ಮತ್ತು ಆಂಡ್ರ್ಯು ರೊಸಿನಿ (57.60ಮೀ.) ಕ್ರಮವಾಗಿ ನಂತರದ ಎರಡು ಸ್ಥಾನಗಳನ್ನು ಗಳಿಸಿದ್ದಾರೆ.ವಿಕಾಸ್ ಕಳೆದ ವರ್ಷ ನಡೆದಿದ್ದ ಲಂಡನ್ ಒಲಿಂಪಿಕ್ಸ್‌ನಲ್ಲಿ 64.79ಮೀಟರ್ಸ್ ದೂರ ಎಸೆದು ಎಂಟನೇ ಸ್ಥಾನ ಗಳಿಸಿದ್ದರು.ಇವರು ಗುವಾಂಗ್‌ಜೌ ಏಷ್ಯನ್ ಗೇಮ್ಸನಲ್ಲಿ ಕಂಚಿನ ಪದಕ (63.13ಮೀ.) ಗೆದ್ದಿದ್ದರೆ, ದೆಹಲಿಯಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಕ್ರೀಡಾ ಕೂಟದಲ್ಲಿ ರಜತ ಪದಕ (63.69ಮೀ.) ಗಳಿಸಿದ್ದರು. ಇದೀಗ ಹಿಂದಿನ ಎಲ್ಲಾ ಸ್ಪರ್ಧೆಗಳಿಗಿಂತಲೂ ಉತ್ತಮ ಸಾಮರ್ಥ್ಯ ತೋರಿರುವ ವಿಕಾಸ್ ತಾವಿನ್ನೂ ಉತ್ತಮ ಫಾರ್ಮ್‌ನಲ್ಲಿರುವುದನ್ನು ಸಾಬೀತು ಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)