ಬುಧವಾರ, ಜನವರಿ 29, 2020
29 °C
ಐ-ಲೀಗ್‌ ಫುಟ್‌ಬಾಲ್‌: ಬಿಎಫ್‌ಸಿಗೆ ಜಯ

ಮಿಂಚಿದ ಸುನಿಲ್‌ ಚೆಟ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಾಯಕ ಸುನಿಲ್‌ ಚೆಟ್ರಿ ತಂದಿತ್ತ ಎರಡು ಗೋಲುಗಳ ನೆರವಿನಿಂದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡ ಐ-ಲೀಗ್‌ ಟೂರ್ನಿಯ ಪಂದ್ಯದಲ್ಲಿ ಜಯ ಸಾಧಿಸಿತು.ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಬಿಎಫ್‌ಸಿ 2-1 ಗೋಲುಗಳಿಂದ ಶಿಲ್ಲಾಂಗ್‌ ಲಜಾಂಗ್‌ ತಂಡವನ್ನು ಮಣಿಸಿತು. ಪಂದ್ಯದ ಏಳು ಹಾಗೂ 34ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದ ಚೆಟ್ರಿ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ಈ ಗೆಲುವಿನ ಮೂ ಲಕ ಬೆಂಗಳೂರಿನ ತಂಡ ಪಾಯಿಂಟ್‌ ಪಟ್ಟಿಯಲ್ಲಿ  ಅಗ್ರಸ್ಥಾನವನ್ನು ಭದ್ರಪಡಿ ಸಿಕೊಂಡಿತು. ಬಿಎಫ್‌ಸಿ 11 ಪಂದ್ಯ ಗಳಿಂದ 21 ಪಾಯಿಂಟ್‌ ಕಲೆಹಾಕಿದೆ.ಪಂದ್ಯದ ಆರಂಭದಿಂದಲೇ ಪ್ರಭುತ್ವ ಸಾಧಿಸಿದ ಬಿಎಫ್‌ಸಿ ಏಳನೇ ನಿಮಿಷದಲ್ಲಿ ಮುನ್ನಡೆ ಸಾಧಿಸಿತು. ರಾಬಿನ್‌ ಸಿಂಗ್‌ ನೀಡಿದ ಪಾಸ್‌ನಲ್ಲಿ ಚೆಂಡನ್ನು ನಿಯಂತ್ರಣಕ್ಕೆ ಪಡೆದುಕೊಂಡ ಚೆಟ್ರಿ ಯಶಸ್ವಿಯಾಗಿ ಗುರಿ ಸೇರಿಸಿದರು. 34ನೇ ನಿಮಿಷದಲ್ಲಿ ಶಿಲ್ಲಾಂಗ್‌ ತಂಡದ ಸುಭಾಷ್‌ ಸಿಂಗ್ ಅವರು ಚೆಟ್ರಿ ಅವರನ್ನು ಕೆಳಕ್ಕೆ ಬೀಳಿಸಿದ್ದಕ್ಕೆ ರೆಫರಿ ಪೆನಾಲ್ಟಿ ವಿಧಿಸಿದರು. ಪೆನಾಲ್ಟಿ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿಸಿದ ಚೆಟ್ರಿ ತಂಡದ ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು.ಶಿಲ್ಲಾಂಗ್‌ ತಂಡ ಎರಡನೇ ಅವ ಧಿಯಲ್ಲಿ ಮರುಹೋರಾಟದ ಸೂಚನೆ ನೀಡಿತು. 81ನೇ ನಿಮಿಷದಲ್ಲಿ ಬೊಯಿ ತಂಗ್‌ ಹೊಕಿಪ್‌ ಗೋಲು ಗಳಿಸಿ ಹಿನ್ನಡೆಯನ್ನು 1-2ಕ್ಕೆ ತಗ್ಗಿಸಿದರು.

ಪ್ರತಿಕ್ರಿಯಿಸಿ (+)