ಮಿಕ್ಸಿಂಗ್ ಕಲೆ

7

ಮಿಕ್ಸಿಂಗ್ ಕಲೆ

Published:
Updated:
ಮಿಕ್ಸಿಂಗ್ ಕಲೆ

ವೈನ್ ಮಿಕ್ಸಿಂಗ್ ಮಾಡುವುದೂ ಒಂದು ಕಲೆ! ಆದರೆ, ಯಾವ ಮಾದರಿಯನ್ನು ಯಾವುದರ ಜತೆಗೆ ಎಷ್ಟು ಪ್ರಮಾಣದಲ್ಲಿ ಮಿಶ್ರ ಮಾಡಬೇಕು,ಅದಕ್ಕೆ ಹೊಂದಿಕೆ ಯಾಗುವಂತೆ ನಿಂಬೆ ಅಥವಾ ಕಿತ್ತಳೆ ರಸವನ್ನು ಎಷ್ಟು, ಹೇಗೆ ಸೇರಿಸಬೇಕು ಎಂದು ತಿಳಿದುಕೊಳ್ಳುವುದೇ ಮುಖ್ಯ. ಅದು ಗೊತ್ತಿದ್ದಲ್ಲಿ ‘ಮಿಕ್ಸಿಂಗ್ ಪೇಯದ  ರುಚಿ ಹಾಗೂ ಗಮ್ಮತ್ತೇ ಗಮ್ಮತ್ತು. ಇಂತಹದೊಂದು ವಿಶಿಷ್ಟ ‘ವೈನ್ ಮಿಕ್ಸಿಂಗ್’ ವಿಧಾನ ತೋರಿಸಿಕೊಟ್ಟವರು ವೈನ್ ಮಿಕ್ಸಿಂಗ್ ಮಾಸ್ಟರ್ ಎಂದೇ ಹೆಸರಾದ ಫ್ರಾನ್ಸ್‌ನ ಎಮಿಲೆ ಚಾಯ್‌ಲೊಟ್.‘ಅಸ್ಪಿರಿ ಸ್ಪೀರಿಟ್ಸ್’ ಆಯೋಜಿಸಿದ್ದ ಈ ಪ್ರಾತ್ಯಕ್ಷಿಕೆಯಲ್ಲಿ ‘ಕಂಪಾರಿ’ ಮತ್ತು ‘ಸ್ಕೈ‘ ಕೆಂಪು ಹಾಗೂ ಬಿಳಿ ಬಣ್ಣದ ವಿಶೇಷ ಕಾಕ್‌ಟೇಲ್, ಕಿತ್ತಳೆ ರಸ ಹಾಗೂ ನಿಂಬೆಹಣ್ಣಿನೊಂದಿಗೆ ಮಿಕ್ಸಿಂಗ್ ಮಾಡುವ ರೀತಿ, ಅದನ್ನು ಗ್ರಾಹಕರಿಗೆ ನೀಡುವ ವಿಧಾನವೇ ಆಕರ್ಷಕವಾಗಿತ್ತು. ಪ್ರಮುಖ ಹೋಟೆಲ್‌ಗಳ ಬಾರ್- ರೆಸ್ಟೋರೆಂಟ್‌ನ ವೈನ್ ಮಿಕ್ಸಿಂಗ್ ಬಾರ್ ಟೆಂಡರ್‌ಗಳೂ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಜೊತೆಯಲ್ಲಿ ಉತ್ತಮ ಹಾಗೂ ರುಚಿಯಾದ ವೈನ್ ಮಿಕ್ಸಿಂಗ್‌ಗಾಗಿ ಪ್ರಶಸ್ತಿ ಗಳಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry