ಮಿಕ್ಸಿಂಗ್ ಸಂಭ್ರಮ

7

ಮಿಕ್ಸಿಂಗ್ ಸಂಭ್ರಮ

Published:
Updated:
ಮಿಕ್ಸಿಂಗ್ ಸಂಭ್ರಮ

ಕ್ರಿಸ್ಮಸ್‌ಗೆ ಇನ್ನೂ ನಾಲ್ಕು ವಾರಗಳಿದ್ದರೂ ವಿವಿಧೆಡೆ ಕೇಕ್ ಮಿಕ್ಸಿಂಗ್‌ನ ಸಡಗರ ಗರಿಗೆದರಿದೆ. ದುರ್ಬಲರು ಮತ್ತು ಸೌಲಭ್ಯವಂಚಿತ ಕುಟುಂಬಗಳ ಮಕ್ಕಳೊಂದಿಗೆ ಅನೇಕರು ಈ ಸಂಭ್ರಮ ಹಂಚಿಕೊಳ್ಳುತ್ತಾರೆ.ಮತ್ತೀಕೆರೆಯ ಪಂಚತಾರಾ ಮೊವೆನ್‌ಪಿಕ್ ಹೋಟೆಲ್‌ನಲ್ಲಿ ಮುಖ್ಯ ಷೆಫ್ ಮಯೂರ್ ರಾಮಚಂದ್ರನ್, ವ್ಯವಸ್ಥಾಪಕ ಗ್ಯಾರಿ ಮೋರನ್ ಮತ್ತು ಸಿಬ್ಬಂದಿ ಏಪ್ರನ್ ತೊಟ್ಟು ಖುಷಿಯಿಂದ ಕೇಕ್ ಮಿಶ್ರಣಕ್ಕೆ ಕೈಜೋಡಿಸಿದರು.ಆನಂದರಾವ್ ವೃತ್ತ ಬಳಿಯ ಜೆಪಿ ಸೆಲೆಸ್ಟಿಯಲ್ ಹೋಟೆಲ್‌ನಲ್ಲಿ ಮಾತ್ರ ಕೇಕ್ ಮಿಕ್ಸಿಂಗ್ ವಿಭಿನ್ನವಾಗಿತ್ತು. ಇಲ್ಲಿ ಹೆಣ್ಣೂರು ರಸ್ತೆ ಸಲೋಂ ಗ್ರೇಸ್ ಚಿಲ್ಡ್ರನ್ಸ್ ಹೋಂನ ಚಿಣ್ಣರನ್ನು ಆಹ್ವಾನಿಸಲಾಗಿತ್ತು. ಈ ಮಕ್ಕಳು ಖುಷಿಯಿಂದ ಭಾಗವಹಿಸಿದ್ದರು. ಇವರಿಗೆ ಭೂರಿ ಭೋಜನದ ವ್ಯವಸ್ಥೆಯೂ ಇತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry