ಮಿಗ್ ವಿಮಾನ ಪತನ, ಪೈಲಟ್ ಪಾರು

7

ಮಿಗ್ ವಿಮಾನ ಪತನ, ಪೈಲಟ್ ಪಾರು

Published:
Updated:

ಗ್ವಾಲಿಯರ್ (ಮಧ್ಯಪ್ರದೇಶ) (ಪಿಟಿಐ,ಐಎಎನ್ ಎಸ್): ಮಧ್ಯಪ್ರದೇಶದ ಅನುಪನಗರ ಜಿಲ್ಲೆಯಲ್ಲಿ , ವಾಯುಸೇನೆಯ ಮಿಗ್-21 ಯುದ್ಧ ವಿಮಾನ ಅಪಘಾತಕ್ಕೀಡಾದ ದುರ್ಘಟನೆ ಶುಕ್ರವಾರ ನಡೆದಿದೆ. ಅದೃಷ್ಟಾವಶಾತ್ ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದಾರೆ.

ಗ್ವಾಲಿಯರ್ ದಿಂದ 150 ಕಿ.ಮೀ ದೂರದಲ್ಲಿ ಅನುಪನಗರದಲ್ಲಿ  ಬೆಳಿಗ್ಗೆ 11.20 ಸುಮಾರು ಈ ದುರ್ಘಟನೆ ನಡೆದಿದೆ. ವಾಯುಸೇನೆಯ ವಕ್ತಾರರು ಸುದ್ದಿ ಸಂಸ್ಥೆಗೆ ಈ ಮಾಹಿತಿ ನೀಡಿದ್ದಾರೆ.

ಈ ದುರ್ಘಟನೆಯ ಕುರಿತು ಇನ್ನೂ ಹೆಚ್ಚಿನ ವಿವರಗಳು ಬರಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry