ಬುಧವಾರ, ಮೇ 12, 2021
26 °C

ಮಿಗ್-21 ಅಪಘಾತ: ಪೈಲಟ್ ಪಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈಪುರ/ನವದೆಹಲಿ (ಐಎಎನ್ ಎಸ್): ಭಾರತೀಯ ಸೇನಾಪಡೆಯ ಮಿಗ್- 21 ಯುದ್ಧವಿಮಾನ ರಾಜಸ್ತಾನದ ಬರ್ಮರ್ ಜಿಲ್ಲೆಯ ಬಳಿ ಶುಕ್ರವಾರ ಅಪಘಾತಕ್ಕೀಡಾಗಿದ್ದು, ಪೈಲಟ್ ಅಚ್ಚರಿಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದರು.ಇಲ್ಲಿನ ಉತ್ತರ್‌ಲಾಯಿ ವಾಯುನೆಲೆಯಿಂದ ಎಂದಿನಂತೆ ತರಬೇತಿ ಹಾರಾಟ ನಡೆಸುತ್ತಿದ್ದ ವಿಮಾನ, ಸಮೀಪದ ಸೊಡಿಯಾರ್ ಎಂಬ ಗ್ರಾಮದಲ್ಲಿ ಬೆಳಿಗ್ಗೆ ಸುಮಾರು 9 ಗಂಟೆ ಸುಮಾರಿಗೆ ಪತನವಾಯಿತು.`ಗಾಯಗೊಂಡಿರುವ ಪೈಲಟ್ ಅವರನ್ನು ಜೋಧ್‌ಪುರದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. `ಘಟನೆಯಲ್ಲಿ ಗ್ರಾಮದ ನಾಗರಿಕರಿಗೆ  ತೊಂದರೆಯಾಗಿಲ್ಲ' ಎಂದು ವರದಿಗಳು ತಿಳಿಸಿವೆ. ಸ್ಥಳಕ್ಕೆ ಪರಿಹಾರ ಕಾರ್ಯಕರ್ತರು ತೆರಳಿದ್ದು, ಘಟನೆ ಕುರಿತು ತನಿಖೆ ಕೈಗೊಳ್ಳಲಾಗಿದೆ ಎಂದು ರಕ್ಷಣಾ ವಕ್ತಾರ ಎಸ್.ಡಿ. ಗೋಸ್ವಾಮಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.