ಮಂಗಳವಾರ, ಮೇ 11, 2021
28 °C

ಮಿಗ್ 21 ವಿಮಾನ ಪತನ, ಪೈಲಟ್ ಪಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಿಗ್ 21 ವಿಮಾನ ಪತನ, ಪೈಲಟ್ ಪಾರು

ಜೈಪುರ (ಪಿಟಿಐ): ಮಿಗ್ 21 ಯುದ್ದ ವಿಮಾನವೊಂದು ಶುಕ್ರವಾರ ಬೆಳಿಗ್ಗೆ ರಾಜಸ್ತಾನದಲ್ಲಿ ಪತನಗೊಂಡಿದ್ದು, ಅದರ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಉತ್ತರಾಲಿ ವಿಮಾನ ನಿಲ್ದಾಣದಿಂದ ದೈನಂದಿನ ತರಬೇತಿಗಾಗಿ ಈ ದುರದೃಷ್ಟ ವಿಮಾನವು ಹಾರಾಟ ಕೈಗೊಂಡಿತ್ತು. ಆದರೆ ಇಲ್ಲಿನ ಬಾರ್‌ಮರ್ ಜಿಲ್ಲೆಯ ಸೊದಿಯಾರ್ ಎಂಬ ಗ್ರಾಮವೊಂದರಲ್ಲಿ ಇದ್ದಕಿದ್ದಂತೆ ಧರೆಗುರುಳಿ ಹೊತ್ತಿ ಉರಿಯಿತು. ಆದಾಗ್ಯೂ ಪೈಲಟ್ ಸುರಕ್ಷಿತವಾಗಿದ್ದಾರೆ ಎಂದು ರಕ್ಷಣಾ ಪಡೆಯ ವಕ್ತಾರರು ತಿಳಿಸಿದ್ದಾರೆ.ವಿಮಾನವು ಮೈದಾನದಲ್ಲಿ ಬಿದ್ದಿದ್ದರಿಂದ ಯಾವುದೇ ಪ್ರಾಣಾಪಾಯ ಅಥವಾ ಆಸ್ತಿ ಹಾನಿ ಸಂಭವಿಸಿಲ್ಲ. ದುರಂತ ನಡೆದ ತಕ್ಷಣ ಅಗ್ನಿಶಾಮಕ ಪಡೆ ಸ್ಥಳಕ್ಕೆ ಬಂದು ಬೆಂಕಿಯನ್ನು ನಂದಿಸಿದರು.ಮಿಗ್ ಸರಣಿಯ ವಿಮಾನಗಳು ಭಾರತದಲ್ಲಿ ಪದೇ ಪದೇ ಅಪಘಾತಕ್ಕೀಡಾಗುತ್ತಿವೆ.ಹಿಂದಿನ ಕೆಲವು ಅಪಘಾತಗಳ ವಿವರ1. 2011ರ ಫೆಬ್ರುವರಿ,  ಗ್ವಾಲಿಯರ್‌ನಲ್ಲಿ

2. 2011ರ ಮಾರ್ಚ್   ಹರಿಯಾಣದಲ್ಲಿ

3. 2011ರ ಏಪ್ರಿಲ್   ಗ್ವಾಲಿಯರ್ ನಲ್ಲಿ

4. 2011ರ ಆಗಸ್ಟ್ ಜೈಪುರದಲ್ಲಿ  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.