ಮಿಜೋರಾಂ ರಾಜ್ಯಪಾಲರಿಗೆ ನಗರದಲ್ಲಿ ಶಸ್ತ್ರಚಿಕಿತ್ಸೆ

7

ಮಿಜೋರಾಂ ರಾಜ್ಯಪಾಲರಿಗೆ ನಗರದಲ್ಲಿ ಶಸ್ತ್ರಚಿಕಿತ್ಸೆ

Published:
Updated:

ಬೆಂಗಳೂರು: ಮಿಜೋರಾಂನ ರಾಜ್ಯಪಾಲ ಎಂ.ಎಂ. ಲಖೇರ ಅವರಿಗೆ ನಗರದ ನಾರಾಯಣ ಹೃದಯಾಲಯದ ವೈದ್ಯರು ಯಶಸ್ವಿಯಾಗಿ ಬೈಪಾಸ್ ಶಸ್ತ್ರಚಿಕಿತ್ಸೆ ನಡೆಸಿದರು.

ಟ್ರಿಪಲ್ ವೆಸೆಲ್ ಬ್ಲಾಕ್ (ಹೃದಯದ ಮೂರು ನಳಿಕೆಗಳಲ್ಲಿ ರಕ್ತಸಂಚಾರಕ್ಕೆ ತೊಂದರೆ) ತೊಂದರೆಯಿಂದ ಬಳಲುತ್ತಿದ್ದ ಅವರು ಕಳೆದ ವಾರ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಸೋಮವಾರ (ಫೆ.14) ಶಸ್ತ್ರಚಿಕಿತ್ಸೆ ನಡೆಸಲಾಯಿತು. ಈಗ ಅವರ ಆರೋಗ್ಯ ಸ್ಥಿರವಾಗಿದ್ದು, 3-4 ದಿನಗಳಲ್ಲಿ ಅವರನ್ನು ಬಿಡುಗಡೆಗೊಳಿಸುವುದಾಗಿ ಆಸ್ಪತ್ರೆಯ ಸಿಬ್ಬಂದಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry