ಮಿಡ್‌ನೈಟ್ ಮ್ಯಾರಥಾನ್

7

ಮಿಡ್‌ನೈಟ್ ಮ್ಯಾರಥಾನ್

Published:
Updated:
ಮಿಡ್‌ನೈಟ್ ಮ್ಯಾರಥಾನ್

ರಾತ್ರಿ 12 ಗಂಟೆಗೆ ಜನ ಮಲಗಿರುವ ಸಮಯದಲ್ಲಿ ಮ್ಯಾರಥಾನ್ ಸ್ಪರ್ಧಿಗಳು ಸಂಚಾರ ದಟ್ಟಣೆಯ ಜಂಜಡವಿಲ್ಲದೆ ಓಡಲಿದ್ದು, ಉದ್ಯಾನ ನಗರಿ ಮಂದಿಗೆ ಮುದ ನೀಡಲಿದ್ದಾರೆ.

ಡಿ. 10ರಂದು ರೋಟರಿ ಬೆಂಗಳೂರು ಐಟಿ ಕಾರಿಡಾರ್ (ಆರ್‌ಬಿಐಟಿಸಿ) ಆಯೋಜಿಸಿರುವ ಬೆಂಗಳೂರು ಇಂಟರ್‌ನ್ಯಾಷನಲ್ ಮಿಡ್‌ನೈಟ್ ಮ್ಯಾರಥಾನ್ 2011ಇದಕ್ಕೆ ವೇದಿಕೆ ಒದಗಿಸಿದೆ.ಇದು ಐದನೇ ಮ್ಯಾರಥಾನ್. ಇದರ ಜೊತೆಗೆ 10ಕೆ (10 ಕಿಮಿ) ಓಟವನ್ನೂ ಸೇರ್ಪಡೆ ಮಾಡಿರುವುದು ವಿಶೇಷ. ಕಾರ್ಪೊರೇಟ್ ವೃತ್ತಿಪರರು, ಸರ್ಕಾರೇತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಈ ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳಬಹುದು.ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಸೌಕರ್ಯ, ಮುಂತಾದ ಸಾಮಾಜಿಕ ಕಾರ್ಯಕ್ರಮಗಳಿಗೆ ನಿಧಿ ಸಂಗ್ರಹಿಸುವ ಉದ್ದೇಶದಿಂದ ಈ ಮ್ಯಾರಥಾನ್ ಆಯೋಜಿಸಲಾಗಿದೆ. ಈ ಸಲದ ಧ್ಯೇಯ `ರನ್ ಫಾರ್ ದಿ ಚೈಲ್ಡ್~. ಇದರಲ್ಲಿ 10 ಸಾವಿರ ಜನ ಭಾಗವಹಿಸುವ ನಿರೀಕ್ಷೆಯಿದೆ ಎನ್ನುತ್ತಾರೆ ಆರ್‌ಬಿಐಟಿಸಿ ಅಧ್ಯಕ್ಷ ಆರ್.ಕೆ. ಮಿಶ್ರಾ.ಈಗಾಗಲೇ ಆನ್‌ಲೈನ್‌ನಲ್ಲಿ ನೋಂದಣಿ ಆರಂಭವಾಗಿದೆ. ಅಂತರರಾಷ್ಟ್ರೀಯ ಮಟ್ಟದ ಓಟಗಾರರು ಪಾಲ್ಗೊಳ್ಳಲಿದ್ದು ಮ್ಯಾರಥಾನ್‌ಗೆ ಮತ್ತಷ್ಟು ರಂಗು ತುಂಬಲಿದ್ದಾರೆ. ಪುರುಷ, ಮಹಿಳೆ ಎಂಬ ಎರಡು ವಿಭಾಗ ಮಾಡಲಾಗಿದೆ. ವಿಜೇತರಿಗೆ ನಗದು ಬಹುಮಾನ ನೀಡಲಾಗುತ್ತದೆ.ಸರ್ಜಾಪುರ ರಸ್ತೆ, ವೈಟ್‌ಫೀಲ್ಡ್ ಹಾಗೂ ಕೆಟಿಪಿಓ (ಕರ್ನಾಟಕ ಟ್ರೇಡ್ ಪ್ರಮೋಷನ್ ಆರ್ಗನೈಸೇಷನ್) ಪ್ರದೇಶದಲ್ಲಿ ಮ್ಯಾರಥಾನ್ ನಡೆಸಲಾಗುವುದು. ರಾತ್ರಿ ಸಂಚಾರ ದಟ್ಟಣೆಯ ಸಮಸ್ಯೆಯಿಲ್ಲದೆ, ತಣ್ಣನೆಯ ವಾತಾವರಣದಲ್ಲಿ ಓಡುವುದೇ ಒಂದು ವಿಶೇಷ ಅನುಭವ. ಇದನ್ನು ವೀಕ್ಷಿಸುವುದು ಅಷ್ಟೇ ರೋಮಾಂಚನ. ಮ್ಯಾರಥಾನ್ ಸಂದರ್ಭದಲ್ಲಿ ರಾಕ್ ಸೇರಿದಂತೆ ವೈವಿಧ್ಯಮಯ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

ಆನ್‌ಲೈನ್‌ನಲ್ಲಿ ನೋಂದಣಿಗೆ: www.midnightmarathon.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry