ಮಂಗಳವಾರ, ಏಪ್ರಿಲ್ 13, 2021
32 °C

ಮಿತಿಮೀರಿದ ಆಸ್ತಿಗಳಿಕೆ: ಪ್ರಕರಣ ರದ್ದು ಪಡಿಸಿದ ಸುಪ್ರೀಂ, ಮಾಯಾವತಿ ನಿರಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಅವರ ವಿರುದ್ಧ ಹೂಡಲಾಗಿದ್ದ 9 ವರ್ಷದಷ್ಟು ಹಳೆಯದಾದ ಮಿತಿ ಮೀರಿದ ಆಸ್ತಿಪಾಸ್ತಿ ಗಳಿಕೆ ಪ್ರಕರಣವನ್ನು ರದ್ದು ಪಡಿಸುವ ಮೂಲಕ ಮಾಯಾವತಿ ಅವರಿಗೆ ಶುಕ್ರವಾರ ಭಾರೀ ಸಮಾಧಾನ ನೀಡಿದ ಸುಪ್ರೀಂಕೋರ್ಟ್, ನ್ಯಾಯಾಲಯದಿಂದ ನಿರ್ದಿಷ್ಟ ನಿರ್ದೇಶನ ಇಲ್ಲದೆಯೇ ಆಕೆಯ ವಿರುದ್ಧ ತನಿಖೆ ಆರಂಭಿಸಿದ್ದಕ್ಕಾಗಿ ಸಿಬಿಐಯನ್ನು ತರಾಟೆಗೆ ತೆಗೆದುಕೊಂಡಿತು.~ಸಿಬಿಐ ಅನುಸರಿಸಿದ ವಿಧಾನ ಅಸಮರ್ಥನೀಯ. ತಾಜ್ ಕಾರಿಡಾರ್ ಹಗರಣದಲ್ಲಿ ತಾನು ನೀಡಿದ ಆದೇಶವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆಯೇ ಸಿಬಿಐ ಅವರ (ಮಾಯಾವತಿ) ವಿರುದ್ಧ ಕ್ರಮ ಕೈಗೊಂಡಿದೆ~ ಎಂದು ಸುಪ್ರೀಂಕೋರ್ಟ್ ಚಾಟಿ ಬೀಸಿತು.ನ್ಯಾಯಮೂರ್ತಿ ಪಿ. ಸದಾಶಿವಂ ನೇತೃತ್ವದ ನ್ಯಾಯಪೀಠವು ~ಹಗರಣದಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಆಜ್ಞಾಪಿಸಿತ್ತು. ಮಾಯಾವತಿಯವರ ವಿರುದ್ಧ ಅವರ ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ ಕುರಿತು  ಪ್ರಥಮ ಮಾಹಿತಿ ವರದಿ (ಎಫ್ ಐ ಆರ್) ದಾಖಲಿಸುವಂತೆ ಯಾವುದೇ ನಿರ್ದೇಶನ ಇರಲಿಲ್ಲ~ ಎಂದು ಸ್ಪಷ್ಟ ಪಡಿಸಿತು.ಸಿಬಿಐ 2008ರ ಸೆಪ್ಟೆಂಬರ್ ನಲ್ಲಿ ಸಲ್ಲಿಸಿದ ವಸ್ತುಸ್ಥಿತಿ ವರದಿಯಲ್ಲಿ ಮಾಯಾವತಿಯವರು 1995ರಿಂದ 2003ರ  ಅವಧಿಯಲ್ಲಿ ಆದಾಯದ ಮಿತಿ ಮೀರಿ ಆಸ್ತಿಪಾಸ್ತಿ ಗಳಿಸಿದ ವಿವರಗಳು ಇರಲಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತು.ತಾಜ್ ಕಾರಿಡಾರ್ ಹಗರಣದಲ್ಲೂ ಅರ್ಜಿದಾರರ (ಮಾಯಾವತಿ) ವಿರುದ್ಧ ಮಿತಿ ಮೀರಿದ ಆಸ್ತಿಪಾಸ್ತಿ ಗಳಿಕೆ ಕುರಿತ ವಾಸ್ತವಿಕ ವರದಿ ಇರಲಿಲ್ಲ ಎಂದು ಸಿಬಿಐಯ ವಸ್ತುಸ್ಥಿತಿ ವರದಿಯನ್ನು ಉಲ್ಲೇಖಿಸಿ ಸುಪ್ರೀಂಕೋರ್ಟ್ ಹೇಳಿತು.2002ರ ತನ್ನ ಆದೇಶ ನಿರ್ದಿಷ್ಟವಾಗಿ ತಾಜ್ ಕಾರಿಡಾರ್ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದ್ದು, ಅದರಲ್ಲಿ ಮಾಯಾವತಿ ಅವರ ವಿರುದ್ಧ ಎಫ್ಐಆರ್ ಸಲ್ಲಿಸಲು ಯಾವುದೇ ನಿರ್ದೇಶನ ಇರಲಿಲ್ಲ ಎಂದೂ ನ್ಯಾಯಪೀಠ ಹೇಳಿತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.