`ಮಿತ್ತಲ್ ವಿರುದ್ಧ ಪ್ರಕರಣ ದಾಖಲಾಗಿಲ್ಲ'

7

`ಮಿತ್ತಲ್ ವಿರುದ್ಧ ಪ್ರಕರಣ ದಾಖಲಾಗಿಲ್ಲ'

Published:
Updated:

ನವದೆಹಲಿ (ಪಿಟಿಐ): `2 ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಭಾರ್ತಿ ಏರ್‌ಟೆಲ್ ವ್ಯವಸ್ಥಾಪಕ ನಿರ್ದೇಶಕ ಸುನೀಲ್ ಮಿತ್ತಲ್ ಅವರ ವಿರುದ್ಧ ಪ್ರಕರಣ ದಾಖಲಾಗಿಲ್ಲ' ಎಂದು ಆಗಿನ ಸಿಬಿಐ ನಿರ್ದೇಶಕ ಎ. ಪಿ. ಸಿಂಗ್ ಮತ್ತು ಸಿಬಿಐ ವಿಚಾರಣಾ ವಿಭಾಗದ ನಿರ್ದೇಶಕರಾದ ಅಬ್ದುಲ್ ಅಜೀಜ್ ಅಭಿಪ್ರಾಯಪಟ್ಟ್ದ್ದಿದಾಗಿ ಅಟಾರ್ನಿ ಜನರಲ್ ಗುಲಾಂ ವಿ. ವಹನ್ವತಿ ಅವರು ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್‌ಗೆ ಕಳೆದ ವಾರ ನೀಡಿದ ಹೇಳಿಕೆಯ ವೇಳೆ ವಹನ್ವತಿ ಇದನ್ನು ಬಹಿರಂಗಪಡಿಸಿದರು. `ಮಿತ್ತಲ್ ವಿಷಯದಲ್ಲಿ ಇವರಿಬ್ಬ ನಡುವೆ ಭಿನ್ನಾಭಿಪ್ರಾಯಗಳಿರಲಿಲ್ಲ. ಹಾಗಾಗಿ ಮೇಲಿನ ವಿಷಯಕ್ಕೆ ಸಂಬಂಧಿಸಿ ನಾನು ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ' ಎಂದು ಅವರು ಹೇಳಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry