ಮಿತ ಆಹಾರ ಸೇವನೆಯಿಂದ ಆರೋಗ್ಯ ಭಾಗ್ಯ

ಬುಧವಾರ, ಮೇ 22, 2019
29 °C

ಮಿತ ಆಹಾರ ಸೇವನೆಯಿಂದ ಆರೋಗ್ಯ ಭಾಗ್ಯ

Published:
Updated:

ದೊಡ್ಡಬಳ್ಳಾಪುರ: ಮಿತವಾಗಿ ಆಹಾರ ಸೇವನೆ ಮಾಡುವ ಮೂಲಕ ಯುವಜನತೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಇಂದಿನ ಆರೋಗ್ಯವಂತ ಯುವಕರೇ ದೇಶದ ಆಸ್ತಿ ಎಂದು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ವೈದ್ಯ ಡಾ.ಬಿ.ಎಂ.ರವಿಶಂಕರ್ ಹೇಳಿದರು.ನಗರದ ಶ್ರೀಕೊಂಗಾಡಿಯಪ್ಪ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ `ಯುವಜನತೆಗೆ ಆರೋಗ್ಯ~ ಕಾರ್ಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ನಗರದ ಸರ್ಕಾರಿ ಆಸ್ಪತ್ರೆಗೆ ದಿನಕ್ಕೆ 400 ರಿಂದ 500 ರೋಗಿಗಳು ತಮ್ಮ ಆರೋಗ್ಯ ತಪಾಸಣೆಗಾಗಿ ಬರುತ್ತಿದ್ದಾರೆ. ಇವರೆಲ್ಲಾ ಕಲುಷಿತವಾದ ನೀರಿನ ಸೇವನೆಯಿಂದ ಅದರಲ್ಲೂ ಹೆಚ್ಚು ಜನ ಪ್ಲೋರೈಡ್ ಸಹಿತವಾದ ನೀರನ್ನು ಕುಡಿದು ಮೂಳೆ ಮತ್ತು ಕಿಡ್ನಿ ರೋಗಗಳಿಗೆ ಬಲಿಯಾಗುತ್ತಿದ್ದಾರೆ.ಯುವ ಜನತೆ ಗಾಂಜಾ, ಅಫೀಮು, ತಂಬಾಕಿನಂತ ದುಶ್ಚಟಗಳಿಗೆ ದಾಸರಾಗಿ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಮದ್ಯಸೇವನೆ ಮಾಡುತ್ತಿದ್ದಾರೆ. ಇದರಿಂದ ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡು ಸಮಾಜ ಕಂಟಕರಾಗುತ್ತಿದ್ದಾರೆ. ತಮ್ಮ ಚಿಕ್ಕ ವಯಸ್ಸಿನಲ್ಲೇ ಮೋಜು ಮಸ್ತಿಗಳಿಗೆ ಮುಂದಾಗುವ ಮೂಲಕ ಹರೆಯ ಅರಳುವಷ್ಟರಲ್ಲೇ ಮುದುಡಿ ಹೋಗುತ್ತಿದ್ದಾರೆ ಎಂದು ವಿಷಾದಿಸಿದರು. ತಂದೆ ತಾಯಿಗಳು ತಮ್ಮ ಕೌಟುಂಬಿಕ  ಜವಾಬ್ದಾರಿಗಳನ್ನು ಹರೆಯದವರ ಮೇಲೆ ಹಾಕುವುದರಿಂದ ಹಣ ಸಂಪಾದನೆ ಮಾಡಲು ಮುಂದಾದ ಯುವಕರು ಚಟಗಳಿಗೆ ಬಲಿಯಾಗುತ್ತಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ವಿ.ಸುಬ್ರಹ್ಮಣ್ಯಂ ವಹಿಸಿದ್ದರು. ಪ್ರಾಧ್ಯಾಪಕಿ ಪ್ರೊ.ಸಾವಿತ್ರಿದೇವಿ, ಡಾ.ಬಿ.ಎನ್.ನರಸಿಂಹಮೂರ್ತಿ, ಪ್ರೊ.ರಂಗಸ್ವಾಮಿ ಬೆಳಕವಾಡಿ, ಪ್ರೊ.ಅಬ್ಲುಲ್‌ರವೂಫ್, ಕೆ.ಸಂಜೀವಕುಮಾರ್,ನಾಗಮಣಿ ಹಾಗೂ ಕಾರ್ಯಕ್ರಮ ಅಧಿಕಾರಿ ಪ್ರೊ.ಚಂದ್ರಪ್ಪ ಮತ್ತಿತರರು ಇದ್ದರು.                                      

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry