ಮಂಗಳವಾರ, ಮೇ 11, 2021
24 °C

`ಮಿದುಳು ಗಡ್ಡೆ: ಆಶಾದಾಯಕ ಚಿಕಿತ್ಸೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಮಿದುಳು ಗಡ್ಡೆ: ಆಶಾದಾಯಕ ಚಿಕಿತ್ಸೆ'

ಬೆಂಗಳೂರು: ಮಿದುಳು  ಗಡ್ಡೆ ಹಾಗೂ ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ಆಶಾದಾಯಕ ಚಿಕಿತ್ಸೆಯೊಂದು ಪರಿಚಯಿಸಲಾಗಿದ್ದು, ಅಯಸ್ಕಾಂತೀಯ ತಂತ್ರಜ್ಞಾನದ (ಎಸ್‌ಬಿಎಎಫ್) ಮೂಲಕ ರೋಗಿಗಳ ಬದುಕುಳಿಯುವ ಸಾಧ್ಯತೆಯನ್ನು ಹೆಚ್ಚಿಸಬಹುದಾಗಿದೆ.ಜೂನ್ 8 ರಂದು ವಿಶ್ವ ಬ್ರೇನ್ ಟ್ಯೂಮರ್ ಹಾಗೂ ಕ್ಯಾನ್ಸರ್ ದಿನಾಚರಣೆ. ಈ ಪ್ರಯುಕ್ತ ಎಸ್‌ಬಿಎಎಫ್ ಹೆಲ್ತ್‌ಕೇರ್ ಮತ್ತು ರಿಸರ್ಚ್ ಸೆಂಟರ್ ಶನಿವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ  ಸೆಂಟರ್ ಸ್ಥಾಪಕ ಡಾ.ವಿಜಿ ವಸಿಷ್ಠ ಅವರು ಈ ಮಾಹಿತಿಯನ್ನು ನೀಡಿದರು.`ಈ ಥೆರಪಿಯಲ್ಲಿ ದೇಹದ ನಿರ್ದಿಷ್ಟ ಅಂಗಾಂಗಗಳ ಮೇಲೆ ಕಂಪ್ಯೂಟರ್‌ನಿಂದ ನಿಯಂತ್ರಿಸಲ್ಪಟ್ಟ ಅಯಸ್ಕಾಂತೀಯ ಕಿರಣಗಳನ್ನು ಹರಿಯಬಿಡಲಾಗುತ್ತದೆ. ಇದರಿಂದ ರೋಗ ಉಲ್ಬಣಗೊಳ್ಳುವುದನ್ನು ತಡೆಯಬಹುದು. ರೋಗದ ಹಂತ ಹಾಗೂ ಗಡ್ಡೆಯ ಬೆಳವಣಿಗೆಯ ಮೇಲೆ ಈ ಚಿಕಿತ್ಸೆಯನ್ನು ನೀಡುತ್ತಾರೆ ಎಂದು ಅವರು ತಿಳಿಸಿದರು.`ಈ ಕಾಯಿಲೆಯಿಂದ ಬಳಲುವವರು ಶಸ್ತ್ರಚಿಕಿತ್ಸೆ, ಕಿಮೋಥೆರಪಿ, ರೇಡಿಯೋಥೆರಪಿ ಸೇರಿದಂತೆ ಹಲವು ಚಿಕಿತ್ಸೆಗಳನ್ನು ಪಡೆದುಕೊಂಡಿದ್ದಾರೆ. ಆದರೆ ಈ ಅಯಸ್ಕಾಂತೀಯ ತಂತ್ರಜ್ಞಾನ ಬದುಕುಳಿಯುವ ಸಾಧ್ಯತೆಯನ್ನು ಹೆಚ್ಚುಮಾಡಿರುವುದನ್ನು ಹಲವು ಮಂದಿ ಸ್ವತಃ ಕಂಡುಕೊಂಡಿದ್ದಾರೆ' ಎಂದು ತಿಳಿಸಿದರು.`ಪ್ರಾಯೋಗಿಕ ಹಂತದ ಚಿಕಿತ್ಸೆಯಲ್ಲಿ 28 ದಿನಗಳ ಕಾಲ ನಿತ್ಯ ಒಂದು ಗಂಟೆಗಳ ಕಾಲ ಚಿಕಿತ್ಸೆ ನೀಡಲಾಗುತ್ತದೆ. ಆ ನಂತರ ರೋಗದ ಪ್ರಮಾಣ ಇಳಿಮುಖವಾಗುತ್ತದೆ. ನಂತರವಷ್ಟೆ ಚಿಕಿತ್ಸೆಯನ್ನು ವಿವಿಧ ಹಂತದಲ್ಲಿ ಕೈಗೊಳ್ಳಲಾಗುತ್ತದೆ'  ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.