ಗುರುವಾರ , ಜೂನ್ 24, 2021
27 °C

ಮಿನರ್ವ-ನ್ಯಾಷನಲ್ ಪಂದ್ಯ ಡ್ರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆ (ಬಿಡಿಎಫ್‌ಎ) ಆಶ್ರಯದಲ್ಲಿ ನಡೆಯುತ್ತಿರುವ `ಬಿ~ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಮಿನರ್ವ ಹಾಗೂ ನ್ಯಾಷನಲ್ ತಂಡಗಳ ನಡುವಿನ ಪಂದ್ಯವು ಡ್ರಾದಲ್ಲಿ ಅಂತ್ಯ ಕಂಡಿತು.ಅಶೋಕ ನಗರದಲ್ಲಿರುವ ಜಿಲ್ಲಾ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಉಭಯ ತಂಡಗಳು ತಲಾ ಒಂದೊಂದು ಗೋಲುಗಳನ್ನು ಗಳಿಸಿದವು. ಪಂದ್ಯದ ಮೊದಲಾರ್ಧ ಗೋಲು ರಹಿತವಾಗಿತ್ತು. ನಂತರ ನ್ಯಾಷನಲ್ ತಂಡದ ಅನಂತ್ 43ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಇದಕ್ಕೆ ಪ್ರತಿಯಾಗಿ ಮಿನರ್ವ ತಂಡದ ಶ್ರವಣ್ 47ನೇ ನಿಮಿಷದಲ್ಲಿ ಗೋಲು ಗಳಿಸಿ ಸಮಬಲ ಸಾಧಿಸಿದರು.ಸನ್ ರೈಸಿಂಗ್ ತಂಡವು ಬಿಡಬ್ಲ್ಯು ಎಸ್‌ಎಸ್‌ಬಿ ತಂಡದಿಂದ ವಾಕ್ ಓವರ್ ಪಡೆಯಿತು

ಶುಕ್ರವಾರದ ಪಂದ್ಯಗಳು: ಸರ್ಕಾರಿ ಮುದ್ರಣಾಲಯ- ಬೆಂಗಳೂರು  ಕಿಕ್ಕರ್ಸ್‌ (ಮಧ್ಯಾಹ್ನ2ಕ್ಕೆ), ಜುಪಿಟರ್-ಒರಿಯಂಟಲ್  (ಮಧ್ಯಾಹ್ನ 3.30ಕ್ಕೆ).

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.